December 15, 2025

ಕಾಸರಗೋಡು: ನೀರು ತುಂಬಿದ್ದ ಬಕೆಟ್‌ನೊಳಗೆ ಬಿದ್ದು 11 ತಿಂಗಳ ಮಗು ಸಾವು

0
IMG-20221224-WA0060.jpg

ಕಾಸರಗೋಡು: ನೀರು ತುಂಬಿದ್ದ ಬಕೆಟ್ ನೊಳಗೆ ಬಿದ್ದು 11 ತಿಂಗಳ ಮಗು ಮೃತಪಟ್ಟ ದಾರುಣ ಘಟನೆ ಅಂಬಲತ್ತರ ದ ಏಳನೇ ಮೈಲ್ ನಲ್ಲಿ ನಡೆದಿದೆ.

ಅಬ್ದುಲ್ ಜಬ್ಬಾರ್ ರವರ ಪುತ್ರ ಮುಹಮ್ಮದ್ ರಿಸಾಯ್ ಮೃತಪಟ್ಟ ಮಗು.

ಮನೆಯ ಜಗಲಿಯಲ್ಲಿ ದಲ್ಲಿ ನೀರು ತುಂಬಿಸಿ ಟ್ಟಿದ್ದ ಬಕೆಟ್ ನೊಳಗೆ ಬಿದ್ದು ಈ ದುರ್ಘಟನೆ ನಡೆದಿದೆ.

ಜಗಲಿಯಲ್ಲಿ ಆಟವಾಡುತ್ತಿದ್ದ ಮಗು ತಾಯಿ ಅಡುಗೆ ಕೋಣೆಗೆ ತೆರಳಿ ಮರಳಿದಾಗ ನಾಪತ್ತೆಯಾಗಿದ್ದು, ಹುಡುಕಾಡಿದಾಗ ಬಕೆಟ್ ನಲ್ಲಿ ಬಿದ್ದಿರುವುದು ಕಂಡು ಬಂದಿದೆ.

ಕೂಡಲೇ ಸಮೀಪದ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ.

Leave a Reply

Your email address will not be published. Required fields are marked *

error: Content is protected !!