ಬಂಟ್ವಾಳ: ವ್ಯವಸಾಯ ಸೇವಾ ಸಹಕಾರಿ ಸಂಘದ ವೀಡಿಯೋ ವೈರಲ್ ವಿವಾದ: ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲು
ಬಂಟ್ವಾಳ: ತಾಲೂಕು, ಕಾವಳಮೂಡೂರು ವ್ಯವಸಾಯ ಸೇವಾ ಸಹಕಾರಿ ಸಂಘದ ವಠಾರದಲ್ಲಿ ನಿನ್ನೆ ದಿನಾಂಕ 21.12.2022 ರಂದು ನಡೆಯಿತೆನ್ನಲಾದ ಘಟನೆ ಬಾಪ್ರಿ ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿರುತ್ತದೆ.
ಸಹಕಾರಿ ಬ್ಯಾಂಕಿನ ಸಿಬಂಧಿಯನ್ನು ತರಾಟೆಗೆ ತೆಗೆದುಕೊಂಡರು ಎಂಬ ವಿಷಯದ ಬಾಪ್ತಿ ಗ್ರಾಹಕರಾದ ನಾನು ಪ್ರಿನ್ಸ್ ಥೋಮಸ್ ಕೋ. ಥೋಮಸ್, ಠಾಣೆಗೆ ದೂರು ನೀಡಿ ಸದ್ರಿ ದೂರಿನಲ್ಲಿ ಸಹಕಾರಿ ಸಂಘದ ಸಿಬಂಧಿಗಳಾದ ಕೇಶವ ಕೋಟ್ಯಾನ್ ಮತ್ತು ರವೀಂದ್ರ ಶೆಟ್ಟಿ ಯವರನ್ನು ಸಾಲದ ಲೆಕ್ಕ ಪತ್ರಗಳ ಬಾಪು ವಿಚಾರಿಸಲಾಗಿದೆಯೇ ಹೊರತು ಸಹಕಾರಿ ಸಂಘದ ಆಡಳಿತ ಸಮಿತಿ ಅಧ್ಯಕ್ಷರು ಅಥವಾ ನಿರ್ದೆಶಕರುಗಳ ಬಗ್ಗೆ ಯಾವುದೇ ಆರೋಪ ಮಾಡಿರುವುದಿಲ್ಲ. ಮತ್ತು ನಮ್ಮ ಸಾಲದ ಲೆಕ್ಕ ಪತ್ರಗಳ ವಿವಾದಕ್ಕೆ ಮತ್ತು ಸಹಕಾರಿ ಸಂಘದ ಆಡಳಿತ ಸಮಿತಿಗೆ ಯಾವುದೇ ಸಂಬಂಧ ಇರುವುದಿಲ್ಲ ಎಂದು ತಿಳಿಯಬಯಸುತ್ತೇನೆ.
ಇತ್ತೀಚಿಗೆ ಸಹಕಾರಿ ಸಂಘದ ವಠಾರದಲ್ಲಿ ನಡೆಯಿತೆನ್ನಲಾದ ಈ ವಿದ್ಯಮಾನವನ್ನು ಒಂದು ಪಕ್ಷದ ಮುಖಂಡರುಗಳು ರಾಜಕೀಯ ಪ್ರೇರಿತವಾಗಿ ಬಳಸಿಕೊಂಡು ಸಹಕಾರಿ ಸಂಘದ ಅಧ್ಯಕ್ಷರ ಮತ್ತು ಆಡಳಿತ ಮಂಡಳಿಯ ಸದಸ್ಯರ ತೇಜೋವದೆ ಮಾಡುವ ದುರುದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸಂಗತಿಗಳನ್ನು ಹರಿಯ ಬಿಟ್ಟಿರುವ ವಿಚಾರದ ಬಾಪು ನಾನು ಈ ಮೂಲಕ ಸ್ಪಷ್ಟಪಡಿಸುತ್ತೇನೆ.




