February 3, 2026

ಕುಂದಾಪುರ: ಬೈಕ್‌ಗಳ ನಡುವೆ ಅಪಘಾತ : ಕಾರಿನ ಚಕ್ರಕ್ಕೆ ಸಿಲುಕಿ ಓರ್ವ ಬೈಕ್ ಸವಾರ ಮೃತ್ಯು

0
IMG-20221218-WA0028.jpg

ಕುಂದಾಪುರ: ಬೈಕ್‌ಗೆ ಡಿಕ್ಕಿ ಹೊಡೆದು ಚಲಿಸುತ್ತಿದ್ದ ಕಾರಿನ ಚಕ್ರಕ್ಕೆ ಸಿಲುಕಿ ದ್ವಿಚಕ್ರವಾಹನ ಸವಾರ ಮೃತಪಟ್ಟ ಘಟನೆ ಬನ್ನಾಡಿ ಸಮೀಪದ ಉಪ್ಪಾಡಿ ಎಂಬಲ್ಲಿ ನಡೆದಿದೆ.

ಗದಗ ಮೂಲದ ಅಲ್ತರೆ ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಗಂಗಾಧರ ಪುಣೇಕರ (22) ಮೃತ ವ್ಯಕ್ತಿ.

ಗಂಗಾಧರ್ ಕುಂದಾಪುರದಲ್ಲಿ ಕರಾಟೆ ತರಬೇತಿ ಮುಗಿಸಿ ಸಾಯಿಬ್ರಕಟ್ಟೆಯ ಮನೆಗೆ ಹೋಗುತ್ತಿದ್ದರು. ಇವರ ಬೈಕ್ ಎದುರಿಗೆ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಗಂಗಾಧರ್ ರಸ್ತೆಗೆ ಬಿದ್ದಿದ್ದು, ಬನ್ನಾಡಿಯಿಂದ ಕೋಟ ಕಡೆಗೆ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.

ಇನ್ನು ಬೈಕ್ ಸವಾರನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಕಾರು ಚಾಲಕ ದೂರು ದಾಖಲಿಸಿದ್ದಾರೆ. ಆದರೆ ಗಂಗಾಧರ್ ಅವರ ಸಹೋದರ ಕಾರು ಚಾಲಕನ ನಿರ್ಲಕ್ಷ್ಯ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ.

ಘಟನಾ ಸ್ಥಳಕ್ಕೆ ಕೋಟ ಠಾಣೆ ಇನ್ಸ್‌ಪೆಕ್ಟರ್ ಮಧು ಬಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!