February 3, 2026

ಉದ್ಘಾಟನೆಗೂ ಮುನ್ನವೇ ಕುಸಿದು ಬಿದ್ದ 13 ಕೋಟಿ ರೂ. ವೆಚ್ಚದ ನದಿ ಸೇತುವೆ..!

0
IMG-20221218-WA0029.jpg

ಬಿಹಾರ: ಬಿಹಾರದ ಬೇಗುಸರಾಯ್‍ನಲ್ಲಿ ಗಂಡಕ್ ನದಿನಲ್ಲಿ ನಿರ್ಮಿಸಲಾಗಿದ್ದ 13 ಕೋಟಿ ರೂ. ವೆಚ್ಚದ 206 ಮೀಟರ್ ಉದ್ದದ ಬ್ರಿಡ್ಜ್ ಉದ್ಘಾಟನೆ ಮುನ್ನ ಕುಸಿದು ಬಿದ್ದಿರುವ ಘಟನೆ ವರದಿಯಾಗಿದೆ.

ಡಿಸೆಂಬರ್‌ 15ರಂದೇ ಸೇತುವೆಯ ಮುಂಭಾಗದಲ್ಲಿ ಬಿರುಕು ಬಿಟ್ಟಿದ್ದು ಗೊತ್ತಾಗಿದ್ದು, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರದ ಮೂಲಕ ಮಾಹಿತಿಯನ್ನೂ ನೀಡಲಾಗಿತ್ತು. ಆದರೆ ಸೇತುವೆ ದುರಸ್ತಿಗೊಳಿಸುವ ಮುನ್ನವೇ ಭಾನುವಾರ ಕುಸಿದಿದ್ದು,ಬ್ರಿಡ್ಜ್‌ ಮುಂಭಾಗ ಕುಸಿದು ನದಿ ಪಾಲಾಗಿದೆ ಎಂದು ವರದಿಯಾಗಿದೆ.

ಇನ್ನು 2016ರಲ್ಲಿ ಮುಖ್ಯಮಂತ್ರಿ ನರ್ಬಾಡ್ ಯೋಜನೆಯಡಿಯಲ್ಲಿ ಈ ಬ್ರಿಡ್ಜ್ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಆ ಬಳಿಕ 2017ರಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ ಉದ್ಘಾಟನೆಗೊಂಡಿರಲಿಲ್ಲ. ಆ ಬಳಿಕ ಕೆಲದಿನಗಳ ಹಿಂದೆ ಸೇತುವೆಯ ಮೇಲ್ಭಾಗದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಇಂದು ಬೆಳಗ್ಗೆ ಕುಸಿದು ಬಿದ್ದಿದೆ.

Leave a Reply

Your email address will not be published. Required fields are marked *

error: Content is protected !!