March 26, 2026

ಬೆಂಗಳೂರು ಕಾಲೇಜು ಶೌಚಾಲಯದಲ್ಲಿ ಕತ್ತು ಕೊಯ್ದುಕೊಂಡು ಕೇರಳದ ವಿದ್ಯಾರ್ಥಿ ಆತ್ಮಹತ್ಯೆ

0
IMG-20221215-WA0026.jpg

ಬೆಂಗಳೂರು:ಬೆಂಗಳೂರಿನ ಆನೇಕಲ್ ಪಟ್ಟಣದ ಕಾಲೇಜೊಂದರಲ್ಲಿ ಓದುತ್ತಿದ್ದ ಕೇರಳ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕಾಲೇಜಿನ ಶೌಚಾಲಯದ ಕೊಠಡಿಯಲ್ಲಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೃತನನ್ನು ಎಎಂಸಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ನಿತಿನ್(19 )ಎಂದು ಗುರುತಿಸಲಾಗಿದೆ.

ಈತ ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಪದಿನಿ ಜರಿಯಾ ಪ್ರದೇಶದ ಬಳಿಯ ಕೊಯಲಾಂಡಿ ಗ್ರಾಮದವನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನು ನಿತಿನ್ ಪೋಷಕರು ದುಬೈನಲ್ಲಿ ನೆಲೆಸಿದ್ದಾರೆ ಮತ್ತು ಆತನ ಸಹೋದರ ಅವರನ್ನು ಕಾಲೇಜಿಗೆ ಸೇರಿಸಿದ್ದನು. ಪೋಷಕರ ನಿರ್ಲಕ್ಷ್ಯವೇ ಆತ್ಮಹತ್ಯೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!