March 20, 2026

ಅಮೇರಿಕದ ಐಯೋವಾದಲ್ಲಿ ರೈಲು ಅಪಘಾತ: ಪುತ್ತೂರು- ಬನ್ನೂರು ನಿವಾಸಿ ಮೃತ್ಯು

0
image_editor_output_image-817151759-1670842669086.jpg

ಪುತ್ತೂರು: ಅಮೇರಿಕದ ಐಯೋವಾದಲ್ಲಿ ರೈಲು ಅಪಘಾತಕ್ಕೀಡಾಗಿ ಪುತ್ತೂರು ಬನ್ನೂರು ನಿವಾಸಿ ವಿದ್ಯಾರ್ಥಿ ದಾರುಣವಾಗಿ ಮೃತಪಟ್ಟ ಘಟನೆ ಬಗ್ಗೆ ವರದಿಯಾಗಿದೆ.

ಬನ್ನೂರು ನಿವಾಸಿ ಮೈಸೂರಿನಲ್ಲಿ ಹಿರಿಯ ಹೊಟೇಲ್ ಉದ್ಯಮಿಯಾಗಿದ್ದ ಅನಂತಕೃಷ್ಣ ರಾವ್ ಎಂಬವರ ಪುತ್ರ ಟಿ.ಎ ಸುಬ್ರಹ್ಮಣ್ಯ ಪಡ್ಡಿಲ್ಲಾಯ(30ವ)ರವರು ಮೃತಪಟ್ಟ ವಿದ್ಯಾರ್ಥಿ.

ಅವರು ಮದ್ರಾಸ್ ಐಐಟಿ ವಿದ್ಯಾರ್ಥಿಯಾಗಿದ್ದು, ಅಮೇರಿಕದಲ್ಲಿ ಕಳೆದ ಎರಡು ವರ್ಷಗಳಿಂದ ಉನ್ನತ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಡಿ.9ರಂದು ಅವರಿಗೆ ರೈಲು ಡಿಕ್ಕಿಯಾಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತರು ತಂದೆ ಅನಂತಕೃಷ್ಣರಾವ್ ಅವರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!