March 20, 2026

ವಿಟ್ಲ: ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

0
IMG-20221209-WA0034.jpg

ವಿಟ್ಲ: ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಳಿಕೆ ಗ್ರಾಮದ ಎರುಂಬು ಶಂಕರನಾರಾಯಣ ದೇವಸ್ಥಾನದ ಸಮೀಪ ನಡೆದಿದೆ.

ಎರುಂಬು ಶಂಕರನಾರಾಯಣ ದೇವಸ್ಥಾನ ಸಮೀಪದ ನಿವಾಸಿ ಜರ್ನಾಧನಾ ಆಚಾರ್ಯ ಪ್ರಾಯ(55) ಮೃತ ವ್ಯಕ್ತಿಯಾಗಿದ್ದಾರೆ.

ಜರ್ನಾಧನಾ ಆಚಾರ್ಯ 2 ವರ್ಷದಿಂದ ಗಂಟಲು ಕ್ಯಾನ್ಸರ್‌ ಖಾಯಿಲೆಯಿಂದ ಬಳಲುತ್ತಿದ್ದು, ಕೆಲವು ದಿನಗಳಿಂದ ತೀವ್ರ ಅಸ್ವಸ್ಥಗೊಂಡಿದ್ದರು. ಎರುಂಬು ದೇವಸ್ಥಾನದ ಗದ್ದೆಗೆ ಹೋಗಿ ಬರುತ್ತಿದ್ದವರು ಡಿ.8ರಂದು 6 ಗಂಟೆಗೆ ಮನೆಯಿಂದ ಹೋದವರು ರಾತ್ರಿಯಾದರು ಮನೆಗೆ ಬರದೇ ಇದ್ದರಿಂದ ಅಕ್ಕಪಕ್ಕದವರು ಸೇರಿ ಎಲ್ಲಾ ಕಡೆ ಹುಡುಕಿದ್ದಾರೆ. ರಾತ್ರಿ 9 ಗಂಟೆ ಮೃತರ ಪುತ್ರ ಸುಜನ್‌ ಮತ್ತು ಸಂಬಂಧಿ ಗಣೇಶ್‌ ಮನೆಯ ಎದುರು ಇರುವ ಖಾಸಗಿಯವರ ಅಡಿಕೆ ತೋಟದಲ್ಲಿ ಹುಡುಕಾಡಿದಾಗ ಕೊಕ್ಕ ಮರಕ್ಕೆ ಪ್ಲಾಸ್ಟಿಕ್‌ ಹಗ್ಗದಿಂದ ಕುತ್ತಿಗೆಗೆ ನೇಣುಬಿಗಿದು ನೇತಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಂಬುಲೆನ್ಸ್‌ ವಾಹನದಲ್ಲಿ ವಿಟ್ಲ ಸಮುದಾಯ ಆಸ್ಪತ್ರೆಗೆ ರಾತ್ರಿ ಕರೆದುಕೊಂಡು ಹೋದಾಗ ವೈದ್ಯರು ಮೃತ ಪಟ್ಟಿರುವುದನ್ನು ದೃಢೀಕರಿಸಿದ್ದಾರೆಂದು ಪತ್ನಿ ವಿಮಾಲ ದೂರಿನಲ್ಲಿ ಹೇಳಿದ್ದಾರೆ.

ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!