ಅಮಾಯಕ ಜನರನ್ನು ಬೆದರಿಸಿ, ಹಣ ವಸೂಲಿ: ಆರೋಪಿಯ ಕೈಗೆ ಕೋಳ ತೊಡಿಸಿ ಮೆರವಣಿಗೆ ಮಾಡಿದ ಪೊಲೀಸರು
ಬೆಂಗಳೂರು: ಅಮಾಯಕ ಜನರನ್ನು ಬೆದರಿಸಿ, ಹಣ ವಸೂಲಿ ಮಾಡುತ್ತಿದ್ದ ಆರೋಪಿಗೆ ಪೊಲೀಸರು ಜನರ ಮುಂದೆಯೇ ಕೈಗೆ ಕೋಳ ತೊಡಿಸಿ, ಮೆರವಣಿಗೆ ಮಾಡಿ ಆತನಿಗೆ ಶಿಕ್ಷೆ ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವ ಸುಹೇಲ್‌ನನ್ನು ಡಿಜೆ ಹಳ್ಳಿ ಪೊಲೀಸರು ಬಂಧಿಸಿ, ಆತನ ಕೈಗೆ ಬೇಡಿ ಹಾಕಿ, ಇಡೀ ಏರಿಯಾದಲ್ಲಿ ಮೆರವಣಿಗೆ ಮಾಡಿದ್ದಾರೆ.
ಆರೋಪಿಗೆ ಬುದ್ಧಿ ಬರಬೇಕು ಹಾಗೂ ಸ್ಥಳೀಯರಿಗೆ ಇಂತಹ ನಟೋರಿಯಸ್‌ಗಳ ಬಗ್ಗೆ ಧೈರ್ಯ ಬರಬೇಕು ಎಂಬ ಕಾರಣಕ್ಕೆ ಪೊಲೀಸರು ಆತನ ಮೆರವಣಿಗೆ ನಡೆಸಿದ್ದಾರೆ.




