ಉಡುಪಿ: ಸೆಗಣಿ ಹೊಂಡಕ್ಕೆ ಬಿದ್ದು ನಾಲ್ಕು ವರ್ಷದ ಮಗು ಸಾವು
ಉಡುಪಿ: ಮಗುವೊಂದು ಹಸುವಿನ ಸೆಗಣಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೆಬ್ರಿ ಸಮೀಪದ ಬಚ್ಚಪ್ಪು ಎಂಬಲ್ಲಿ ನಡೆದಿದೆ.
ಜಾರ್ಖಂಡ್ ಮೂಲದ ಓಕನ್ ಎಂಬುವವರ ಪುತ್ರ ಮುನೇಶ್ವರ (4) ಈ ದುರಂತಕ್ಕೆ ಬಲಿಯಾದ ದುರ್ದೈವಿ.
ಆಂಟನಿ ಎಂಬುವವರ ಜಮೀನಿನಲ್ಲಿ ಓಕನ್ ಕೂಲಿ ಕೆಲಸ ಮಾಡುತ್ತಿದ್ದು, ಜಮೀನಿನಲ್ಲಿ ಆಟವಾಡುತ್ತಿದ್ದಾಗ ಮಗು ಆಕಸ್ಮಿಕವಾಗಿ ಗುಂಡಿಗೆ ಬಿದ್ದಿದೆ.
ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




