March 20, 2026

400 ಅಡಿ ಆಳದ ಕೊಳವೆ ಬಾವಿಗೆ ಬಿದ್ದ 8 ವರ್ಷದ ಬಾಲಕ

0
IMG-20221207-WA0003.jpg

ಬೆತುಲ್: ಗದ್ದೆ ಬದಿ ಆಟವಾಡುತ್ತಿದ್ದ 8 ವರ್ಷದ ಬಾಲಕನೊಬ್ಬ ಕೊಳವೆ ಬಾವಿಗೆ ಬಿದ್ದು ಸಿಲುಕಿರುವ ಘಟನೆ ಮಧ್ಯ ಪ್ರದೇಶದ ಬೆತುಲ್ ಜಿಲ್ಲೆ ಮಾಂಡವಿ ಗ್ರಾಮದಲ್ಲಿ ಡಿ.6 ರಂದು ನಡೆದಿದೆ.

ಮಂಗಳವಾರ ಸಂಜೆ 5 ಗಂಟೆಗೆ ಸುಮಾರಿಗೆ ಆಟವಾಡುತ್ತಿದ್ದ ತನ್ಮಯ್ ದಿಯಾವರ್ ಎಂಬ ಬಾಲಕ ಇತ್ತೀಚೆಗೆಗಷ್ಟೇ ಕೊರೆಯಲಾದ 400 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದು, ಸುಮಾರು 60 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದಾನೆ.

ಇನ್ನು ಬಾಲಕನಿಗೆ ಆಮ್ಲಜನಕ ನೀಡಲು ವ್ಯವಸ್ಥೆ ಮಾಡಲಾಗಿತ್ತು, ಆದರೆ ಆತ ಸ್ಪಂದಿಸದ ಕಾರಣ ಅಧಿಕಾರಿಗಳು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕಾರ್ಯಚರಣೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನಿರತರಾಗಿದ್ದು, ಕೊಳವೆ ಬಾವಿ ಸುತ್ತಲಿನ ಪ್ರದೇಶವನ್ನು ಅಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!