ಯುಎಇಯ ಕೆಲವು ಭಾಗಗಳಲ್ಲಿ ಲಘು ಭೂಕಂಪನ ಅನುಭವ

ದುಬೈ: ಇರಾನ್‌ನಲ್ಲಿ ಸಂಭವಿಸಿದ ಭೂಕಂಪದ ನಂತರ ಭಾನುವಾರ ಸಂಜೆ ದುಬೈ ಮತ್ತು ಶಾರ್ಜಾ ಸೇರಿದಂತೆ ಯುಎಇಯ ಕೆಲವು ಭಾಗಗಳಲ್ಲಿ ಹಲವಾರು ಜನರು ಭೂಕಂಪನ ಅನುಭವಕ್ಕೆ ನಡುಗಿದರು.
ಇರಾನ್‌ನ ದಕ್ಷಿಣದಲ್ಲಿ ಸಂಜೆ 4.07ಕ್ಕೆ ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪನ ಜಾಲ ದೃಢಪಡಿಸಿದೆ.
ಅಧಿಕೃತ US ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಭೂಕಂಪವು ಇರಾನ್‌ನ ಬಂದರ್ ಅಬ್ಬಾಸ್‌ನ 62km NNW 8.7km ಆಳದಲ್ಲಿ ದಾಖಲಾಗಿದೆ.
