March 23, 2026

ಸಾಲೆತ್ತೂರು ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಶನ್: ಅಧ್ಯಕ್ಷರಾಗಿ ಪಿ.ಕೆ. ಹಸೈನಾರ್ ಕುಕ್ಕಾಜೆ, ಕಾರ್ಯದರ್ಶಿಯಾಗಿ ಆರಿಫ್ ಕರೈ ಆಯ್ಕೆ

0
image_editor_output_image667103004-1670049719415.jpg

ವಿಟ್ಲ : ಸಮಸ್ತ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ಸಾಲೆತ್ತೂರು ರೇಂಜ್ ಇದರ ವಾರ್ಷಿಕ ಮಹಾಸಭೆಯು ಸಾಲೆತ್ತೂರು ಹಿದಾಯತ್ತುಲ್ ಮದರಸ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಪಿ.ಕೆ. ಹಸೈನಾರ್ ಕುಕ್ಕಾಜೆ ಅಧ್ಯಕ್ಷತೆಯಲ್ಲಿ ನಡೆದ ನಡೆದ ಈ ಸಭೆಯನ್ನು ಸಿ. ಎಚ್. ಇಬ್ರಾಹಿಂ ಮುಸ್ಲಿಯಾರ್ ಉದ್ಘಾಟಿಸಿದರು. ಸಾಲೆತ್ತೂರು ರೇಂಜ್ ಜಂ- ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬೂಬಕರ್ ಸಿದ್ದೀಕ್ ಅರ್ಷದಿ ದು:ಹಾ ನೆರವೇರಿಸಿದರು
ದ.ಕ.ಜಿಲ್ಲಾ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ರಫೀಕ್ ಹಾಜಿ ನೇರಳಕಟ್ಟೆ ಚುನಾವಣಾಧಿಕಾರಿ ಯಾಗಿ ಭಾಗವಹಿಸಿದ್ದರು. ಜಿಲ್ಲಾ ಮದರಸ ಮ್ಯಾನೇಜ್ಮೆಂಟ್ ಸದಸ್ಯ ರಫೀಕ್ ಕುಕ್ಕಾಜೆ ಮತ್ತು ಅಬೂಸಿರಾಜ್ ಅಬೂಬಕರ್ ಉಸ್ತಾದ್ ಕುಕ್ಕಾಜೆ ಉಪಸ್ಥಿತರಿದ್ದರು.

ಕಾರ್ಯದರ್ಶಿ ಆರಿಫ್ ಕರೈ ವರದಿ ವಾಚಿಸಿ ಲೆಕ್ಕಪತ್ರವನ್ನು ಮಂಡಿಸಿದರು. ಇದೇ ವೇಳೆ 2022-23 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.

ಅಧ್ಯಕ್ಷರಾಗಿ ಪಿ.ಕೆ.ಹಸೈನಾರ್ ಕುಕ್ಕಾಜೆ, ಕಾರ್ಯದರ್ಶಿಯಾಗಿ ಆರಿಫ್ ಕರೈ ಕೋಶಾಧಿಕಾರಿಯಾಗಿ ಹಕೀಮ್ ಪರ್ತಿಪಾಡಿ ಪುನರಾಯ್ಕೆ ಗೊಂಡರು ಉಪಾಧ್ಯಕ್ಷರುಗಳಾಗಿ ದಾವೂದ್ ಸಾಲೆತ್ತೂರು, ಅಹ್ಮದ್ ಕುಂಞಿ ಕುರಿಯಪಾಡಿ ಜೊತೆ ಕಾರ್ಯದರ್ಶಿಗಳಾಗಿ ಶರೀಫ್ ಮುಸ್ಲಿಯಾರ್ ಪರಪ್ಪು ಅಬ್ದುಲ್ ರಹ್ಮಾನ್ ಕಡಂಬು ವರ್ಕಿಂಗ್ ಕಾರ್ಯದರ್ಶಿಯಾಗಿ ಇಝ್ಝತ್ ಮುಹಮ್ಮದ್ ಕುಕ್ಕಾಜೆ ಪತ್ರಿಕಾ ಕಾರ್ಯದರ್ಶಿಯಾಗಿ ರಫೀಕ್ ಮುಸ್ಲಿಯಾರ್ ಕಡಂಬು ಆಯ್ಕೆಯಾದರು

Leave a Reply

Your email address will not be published. Required fields are marked *

error: Content is protected !!