ಐಟಂ ಹಾಡಿಗೆ ಮಕ್ಕಳೆದುರು ಹಾಡಿಗೆ ನರ್ತಿಸಿದ ಶಿಕ್ಷಕಿ: ವೀಡಿಯೋ ವೈರಲ್
ದಿಲ್ಲಿ: ಈ ವಿಡಿಯೋದಲ್ಲಿ ಶಿಕ್ಷಕಿಯೊಬ್ಬರು ತರಗತಿಯಲ್ಲಿ ಮಕ್ಕಳೆದುರು ಭೋಜಪುರಿ ಹಾಡಿಗೆ ನರ್ತಿಸಿದ್ದಾರೆ. ನೆಟ್ಟಿಗರು ಈ ವಿಡಿಯೋ ನೋಡಿ ಕೋಪಗೊಂಡಿದ್ದಾರೆ.
ಶಿಕ್ಷಕಿಯ ಈ ನಡೆ ಉಚಿತವಾಗಿಲ್ಲ ಎಂದು ಆರೋಪಿಸುತ್ತಿದ್ದಾರೆ. ಅಷ್ಟೇ ಅಲ್ಲ ಅವರನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ಶಿಕ್ಷಕಿಯೂ ಮತ್ತು ಮಕ್ಕಳು ಖುಷಿಯಿಂದಲೇ ಈ ನೃತ್ಯದಲ್ಲಿ ಪಾಲ್ಗೊಂಡಿದ್ದಾರೆ. ಪಾಟ್ಲಿ ಕಮಾರಿಯಾ ಮೋರಿ ಎಂಬ ಹಾಡಿಗೆ ನೃತ್ಯವನ್ನು ಮಾಡುತ್ತಿದ್ದಾರೆ ಈ ಶಿಕ್ಷಕಿ. ಇವರು ರೀಲ್ಸ್ಗಾಗಿಯೇ ಈ ವಿಡಿಯೋ ಮಾಡಿದಂತಿದೆ ಹಾಗಾಗಿ ಇವರನ್ನು ಅಮಾನತುಗೊಳಿಸಬೇಕು ಎನ್ನುತ್ತಿದ್ದಾರೆ ನೆಟ್ಟಿಗರು.
26,000ಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಶಿಕ್ಷಕಿ ಅಸಭ್ಯ ರೀತಿಯಲ್ಲಿ ನರ್ತಿಸಿದ್ಧಾರೆ ಎಂದು ನೆಟ್ಟಿಗರು ದೂರುತ್ತಿದ್ದಾರೆ. ತಕ್ಷಣವೇ ಈಕೆಯನ್ನು ಅಮಾನತುಗೊಳಿಸಬೇಕು. ಮಕ್ಕಳೆದುರು ಇಂಥ ನೃತ್ಯಗಳು ಸಲ್ಲದು, ಇದು ಶಿಕ್ಷಕ ವೃತ್ತಿಗೇ ಅವಮಾನ ಎಂದಿದ್ದಾರೆ ಒಬ್ಬರು.
ಐಟಂ ಡ್ಯಾನ್ಸ್ ಮಾಡಬೇಕಿಲ್ಲ ತರಗತಿಯಲ್ಲಿ. ಸನಾತನ ಧರ್ಮದಲ್ಲಿ ಶಿಕ್ಷಕ ಅಥವಾ ಗುರುವಿನ ಬಗ್ಗೆ ಅಪಾರ ಗೌರವ ಇದೆ. ಇದನ್ನು ಇಂದಿನ ಶಿಕ್ಷಕರು ಕಾಪಾಡಿಕೊಳ್ಳಬೇಕು ಮತ್ತು ಮಕ್ಕಳಿಗೂ ಕಲಿಸಬೇಕು ಎನ್ನುತ್ತಿದ್ಧಾರೆ ಹಲವರು.




