February 4, 2026

ಮೂವರ ಮೇಲೆ ಚಾಕು ಇರಿತ: ಆಸ್ಪತ್ರೆಗೆ ದಾಖಲು

0
image_editor_output_image-218346362-1670039736848.jpg

ಗದಗ: ಮೂವರ ಮೇಲೆ ಚಾಕು ಇರಿದು ಹಲ್ಲೆ ಮಾಡಿದ ಘಟನೆ ನಗರದ ಕಿಲ್ಲಾ ಓಣಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

ನಗರದ ಕಿಲ್ಲಾ ಓಣಿಯಲ್ಲಿನ ನಿವಾಸಿಗಳಾದ ಗೋಪಾಲ ಖೊಡೆ, ಮಾಧು ಬದಿ, ವಸಂತ ಬಾಕಳೆ ಎಂಬವರ ಮೇಲೆ ಹಲ್ಲೆ ನಡೆದಿದೆ.

ಗಾಯಾಳುಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆಗೆ ನಿಖರ ಕಾರಣ ಏನೆಂದು ತಿಳಿದು ಬಂದಿಲ್ಲ. ರಾತ್ರಿ ಊಟ ಮಾಡಿ‌ ಮನೆ ಹೊರಗಡೆ ಮಾತನಾಡುತ್ತ ನಿಂತವರ ಮೇಲೆ ಬೈಕ್ ಮೇಲೆ ಬಂದ ನಾಲ್ವರು ಚಾಕು ಇರಿದು ಹಲ್ಲೆ ಮಾಡಿದ್ದು, ಅವರ ಕಣ್ಣು, ಎದೆ, ಕೈ, ಹೊಟ್ಟೆ ಭಾಗಗಳಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಸೇಂಟ್ಲಿಮೆಂಟ್ ನ ಶಿವು, ಕಿಲ್ಲಾ ಓಣಿಯ ಸಾದಿಕ್ ಹಾಗೂ ವಿನೀಶ್ ಎಂಬವರ ಮೇಲೆ ಆರೋಪಗಳು ಕೇಳಿ ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!