August 14, 2026

ಬೆಳ್ತಂಗಡಿ: ಸ್ನೇಹಿತರಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದ ಆಟೊ ಚಾಲಕ, ಗುರುವಾಯನಕೆರೆಯ ಕೆರೆಯಲ್ಲಿ ತೀವ್ರ ಹುಡುಕಾಟ

0
image_editor_output_image1553669349-1669789431062.jpg

ಬೆಳ್ತಂಗಡಿ: ಗೆಳೆಯರಿಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದ ಆಟೊ ರಿಕ್ಷಾ ಚಾಲಕನಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಗುರುವಾಯನಕೆರೆಯ ಕೆರೆಯಲ್ಲಿ ಹುಡುಕಾಟ ನಡೆಸುತ್ತಿದೆ.

ಬೆಳ್ತಂಗಡಿಯಲ್ಲಿ ರಿಕ್ಷಾ ಚಾಲಕಾನಾಗಿರುವ ಪ್ರವೀಣ್ ಪಿಂಟೊ ಎಂಬವರು ಇಂದು ಬೆಳಗ್ಗೆ ತನ್ನ ಸ್ನೇಹಿತರಿಗೆ ಕರೆ ಮಾಡಿ ತಾನು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.

ಇದರಿಂದ ಆತಂಕಿತರಾದ ಸ್ಥಳೀಯರು ಹುಡುಕಾಟ ನಡೆಸಿದಾಗ ಗುರುವಾಯನಕೆರೆ ಕೆರೆಯ ಬದಿಯಲ್ಲಿ ಪ್ರವೀಣ್ ಚಪ್ಪಲಿ ಹಾಗೂ ಆಧಾರ್ ಕಾರ್ಡ್ ಲಭಿಸಿದೆ. ಈ ಹಿನ್ನೆಲೆಯಲ್ಲಿ ಪ್ರವೀಣ್ ಕೆರೆಗೆ ಹಾರಿರಬಹುದೆಂದು ಶಂಕಿಸಿರುವ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!