August 14, 2026

ರ‍್ಯಾಗಿಂಗ್‌ನಿಂದ ತಪ್ಪಿಸಿಕೊಳ್ಳಲು ಹಾಸ್ಟೆಲ್‌ ಮಹಡಿಯಿಂದ ಜಿಗಿದ ವಿದ್ಯಾರ್ಥಿ: ಗಂಭೀರ ಗಾಯ, ಐವರು ವಿದ್ಯಾರ್ಥಿಗಳು ಅರೆಸ್ಟ್

0
IMG-20221128-WA0010.jpg

ಅಸ್ಸಾಂ: ವಿದ್ಯಾರ್ಥಿಗಳು ಜೂನಿಯರ್‌ಗೆ ರ‍್ಯಾಗಿಂಗ್‌ ಮಾಡಲು ಮುಂದಾಗಿದ್ದು, ಇದರಿಂದ ತಪ್ಪಿಸಿಕೊಳ್ಳಲು ವಿದ್ಯಾರ್ಥಿಯೊಬ್ಬ ಹಾಸ್ಟೆಲ್‌ನ 2ನೇ ಮಹಡಿಯಿಂದ ಜಿಗಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ದಿಬ್ರುಗಢ ವಿಶ್ವವಿದ್ಯಾಲಯದಲ್ಲಿ ನಡೆದಿದೆ.

ವಾಣಿಜ್ಯ ವಿಭಾಗದ ಜೂನಿಯರ್ ವರ್ಷದ ವಿದ್ಯಾರ್ಥಿ ಆನಂದ್ ಶರ್ಮಾನನ್ನು ಐಸಿಯುಗೆ ದಾಖಲಿಸಲಾಗಿದ್ದು, ಈ ಬಗ್ಗೆ ದಿಬ್ರುಗಢ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಐವರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

ಇನ್ನು ಆನಂದ್ ಶರ್ಮಾ ತಾಯಿ ಸರಿತಾ ಶರ್ಮಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ, ಕಳೆದೊಂದು ವಾರದಿಂದ ರ‍್ಯಾಗಿಂಗ್‌ಗೆ ನನ್ನ ಮಗ ಒಳಗಾಗಿದ್ದು, ಆತನ ಸೀನಿಯರ್‌ಗಳು ರಾಡ್ ಮತ್ತು ಬಾಟಲಿಗಳಿಂದ ಚಿತ್ರಹಿಂಸೆ ನೀಡಿ 80 ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ಈ ಕಿರುಕುಳದ ಬಗ್ಗೆ ತನ್ನ ಮಗ ಹಾಸ್ಟೆಲ್ ವಾರ್ಡನ್‌ಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಈ ಘಟನೆ ಕುರಿತು ನಾವು ವಿಚಾರಣೆ ನಡೆಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ದಿಬ್ರುಗಢ ವಿಶ್ವವಿದ್ಯಾಲಯದ ಉಪಕುಲಪತಿ ಜಿತೇನ್ ಹಜಾರಿಕಾ ಹೇಳಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!