March 21, 2026

ಪುತ್ತೂರು: ಶಾಲಾ ವಿದ್ಯಾರ್ಥಿಗೆ ಬೈಕ್ ಢಿಕ್ಕಿ: ಗಾಯ, ಆಸ್ಪತ್ರೆಗೆ ದಾಖಲು

0
IMG-20221127-WA0016.jpg

ಪುತ್ತೂರು: ಶಾಲಾ ವಿದ್ಯಾರ್ಥಿಗೆ ಬೈಕೊಂದು ಢಿಕ್ಕಿಯಾದ ಘಟನೆ ಬಲ್ನಾಡು ಗ್ರಾಮದ ಉಜ್ರುಪಾದೆ ಎಂಬಲ್ಲಿ ನಡೆದಿದೆ.

ಬಲ್ನಾಡು ಪದವು ನಿವಾಸಿ ಪೂವಪ್ಪ ನಾಯ್ಕ್ ಎಂಬವರ ಪುತ್ರ, ಹಾರಾಡಿ ಶಾಲೆಯ ವಿದ್ಯಾರ್ಥಿ ಪ್ರೀತಮ್ ಅವರು ಗಾಯಗೊಂಡವರು.

ಪ್ರೀತಮ್ ಅವರು ಮನೆಯವರೊಂದಿಗೆ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭ ಉಜ್ರುಪಾದೆಯಲ್ಲಿ ತಿಂಡಿ ತರಲೆಂದು ಕಾರಿನಿಂದ ಇಳಿದು ಅಂಗಡಿಯೊಂದಕ್ಕೆ ಹೋಗಿ ಹಿಂದಿರುಗುವ ಸಂದರ್ಭ ಬೈಕೊಂದು ಅವರಿಗೆ ಡಿಕ್ಕಿಯಾಗಿದೆ.

ಢಿಕ್ಕಿಯ ರಭಸಕ್ಕೆ ತೀವ್ರ ಗಾಯಗೊಂಡ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!