March 23, 2026

ಸುಳ್ಯ: ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಸ್ಥಾನಕ್ಕೆ ಆಡಳಿತ ಪಕ್ಷದ ಸದಸ್ಯರ ರಾಜೀನಾಮೆ ಪರ್ವ: ನಾಲ್ಕು ಸದಸ್ಯರಿಂದ ರಾಜೀನಾಮೆ

0
IMG-20221125-WA0047.jpg

ಸುಳ್ಯ: ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಸ್ಥಾನಕ್ಕೆ ಆಡಳಿತ ಪಕ್ಷದ ಸದಸ್ಯರ ರಾಜೀನಾಮೆ ಪರ್ವ ಆರಂಭಗೊಂಡಿದೆ.

ಕಾಂಗ್ರೆಸ್ ಪಕ್ಷದ ಮುಖಂಡ ಹಿರಿಯ ರಾಜಕಾರಣಿ ಸೋಮಶೇಖರ ಕೊಯಿಂಗಾಜೆ ರವರು ನಿನ್ನೆ ದಿನ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನ ಹಿಂದೆ ಇಂದು ಮತ್ತೆ ಮೂವರು ಸದಸ್ಯರು ರಾಜೀನಾಮೆಯನ್ನು ನೀಡಿದ್ದಾರೆ.

ಪಂಚಾಯತ್ ಉಪಾಧ್ಯಕ್ಷೆ ಮೊನಾಲಿಸಾ, ಸದಸ್ಯರಾದ ಸವಾದ್ ಗೂನಡ್ಕ, ವಿಮಲಾ ಪ್ರಸಾದ್ ಇಂದು ರಾಜಿನಾಮೆ ನೀಡಿದ ಸದಸ್ಯರಾಗಿದ್ದಾರೆ.
ಸಂಪಾಜೆ ಗ್ರಾಮ ಪಂಚಾಯತಿಯ ಒಟ್ಟು 14 ಮಂದಿ ಸದಸ್ಯರಲ್ಲಿ ಒಂದು ಬಿಜೆಪಿ ಪಕ್ಷ ಉಳಿದ 13 ಸ್ಥಾನವನ್ನು ಕಾಂಗ್ರೆಸ್ ಪಕ್ಷ ಪಡೆದುಕೊಂಡಿತ್ತು.

ಇದೀಗ ಆಡಳಿತ ಪಕ್ಷದ ನಾಲ್ಕು ಮಂದಿ ಸದಸ್ಯರು ರಾಜೀನಾಮೆಯನ್ನು ನೀಡಿದ್ದು ಇನ್ನು ಇಬ್ಬರು ಸದಸ್ಯರು ಶೀಘ್ರದಲ್ಲಿ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಸಂಪಾಜೆ ಗ್ರಾಮದ ರಾಜಕೀಯ ಚದುರಂಗದಾಟ ಎಲ್ಲಿಗೆ ಬಂದು ಮುಟ್ಟುತ್ತದೆ ಎಂಬುದು ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!