May 17, 2026

ವಿಟ್ಲ: ಮಹಿಳೆಯರ ವಿನ್ಯಾಸ ಭರಿತ ಉಡುಪುಗಳ ಮಳಿಗೆ ಇವಾ ವುಮೆನ್ ಫ್ಯಾಷನ್ ಶುಭಾರಂಭ

0
IMG-20221124-WA0065

ವಿಟ್ಲ: ಮಹಿಳೆಯರ ವಿನ್ಯಾಸ ಭರಿತ ಉಡುಪುಗಳ ಮಳಿಗೆ ಇವಾ ವುಮೆನ್ ಫ್ಯಾಷನ್ ವಿಟ್ಲದ ವಿ.ಹೆಚ್ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು.

ವಿಟ್ಲ ಕೇಂದ್ರ ಜಮಾ ಮಸೀದಿಯಾ ಮುದರ್ರಿಸ್ ನಸೀಹ್ ದಾರಿಮಿ ಮತ್ತು ಕಂಬಳ ಬೆಟ್ಟು ಮಸೀದಿಯ ಮುದರ್ರಿಸ್ ಇಬ್ರಾಹೀಂ ಮದನಿ ದುವಾ ಆಶಿರ್ವಚನ ನೀಡಿದರು.

ಅತಿಥಿಗಳಾಗಿ ಟೌನ್ ಮಸೀದಿಯ  ಉಸ್ತಾದ್, ಹಕೀಂ ಅರ್ಶದಿ, ಮಹಮ್ಮದ್ ಹನೀಫ್ ಸಖಾಪಿ,  ಅಬ್ಬಾಸ್ ದಾರಿಮ ಕೆಲಿಂಜ,  ಇಸ್ಮಾಯಿಲ್ ಹನೀಫ್ ಶುಭ ಹಾರೈಸಿದರು.‌

ಮಳಿಗೆಯನ್ನು ರಂಗಭೂಮಿ ಹಾಗೂ ಕೋಸ್ಟಲ್‌ವುಡ್‌ನ ಖ್ಯಾತ ನಟಿ ಚೈತ್ರಾ ಶೆಟ್ಟಿ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಳಿಗೆಗೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಜಂಇಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ, ಪ್ರಮುಖರಾದ ಶಾಕೀರ್ ಅಳಕೆಮಜಲು, ಅಶ್ರಫ್ ವಿಕೆಎಂ,  ದಿವಾಕರ್ ವಿಟ್ಲ, ರಮಾನಾಥ್ ವಿಟ್ಲ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಳಿಗೆಗೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ, ಅಬೂಬಕ್ಕರ್ ಪುತ್ತು ಉಪ್ಪಿನಂಗಡಿ,  ಮೊಯಿದ್ದೀನ್ ಹಾಜಿ, ಉಮಾರ್ ಕಂಬಳಬೆಟ್ಟು, ಟಾಪ್ಕೋ ಜುವೆಲ್ಲರಿ ಮಾಲಕ ಮಹಮ್ಮದ್ ಟಿ.ಕೆ, ಉಬೈದ್ ವಿಟ್ಲ ಬಝಾರ್, ಕಲಂದರ್ ಪರ್ತಿಪ್ಪಾಡಿ, ಗಲ್ಫ್ ಟೂರ್ಸ್ ಮಾಲಕ ಸುಲೈಮಾನ್ ಪುತ್ತೂರು, ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್, ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಜಯಂತ, ಸಿದ್ದೀಕ್ ವಿಟ್ಲ ಬಝಾರ್ ,ಸಂಶುದ್ದೀನ್ ಫಾತಿಮಾ ಮಾರ್ಕೆಟ್, ನೌಸೀನ್ ಮಂಗಳೂರು, ಅಝೀಜ್ ಸನ, ಶೀತಲ್ ಕಲೆಕ್ಷನ್ ಮಾಲಕ ಇಕ್ಬಾಲ್ ಶೀತಲ್, ಶರೀಫ್ ಫ್ಯಾನ್ಸಿ ಪಾರ್ಕ್, ಅಶ್ರಫ್ ತೈಬಾ, ರಕ್ಷಿತ್ ಆರ್.ಎಸ್, ರಹೀಮ್ ವಿಟ್ಲ, ತೌಸೀಪ್ ಎಂ.ಜಿ, ಹರ್ಷದ್ ಕುಕ್ಕಿಲ,  ಹರ್ಷದ್ ಸರಾವು, ಶಮೀರ್ ಎಸ್ ಸ್ಮಾರ್ಟ್, ಉಪಸ್ಥಿತರಿದ್ದರು.

ವಿಟ್ಲ ಪುತ್ತೂರು ರಸ್ತೆಯಲ್ಲಿ ಕಾರ್ಯಚರಿಸುತ್ತಿರುವ ವಿಹೆಚ್ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡ ತೌಸಿಫ್, ಸಹಿಫ್, ಪಾದ್ ಮಾಲಕತ್ವದ ಇವಾ ಮಳಿಗೆಯಲ್ಲಿ ಲೇಡೀಸ್ ಕುರ್ತೀಸ್, ಟಾಪ್-ಪ್ಯಾಂಟ್, ಲೆಗಿನ್ಸ್, ವಿನ್ಯಾಸಭರಿತ ಶಾಲು, ಸೇರಿದಂತೆ ಎಲ್ಲಾ ರೀತಿಯ ಮಹಿಳೆಯರ ಟ್ರೆಂಡ್ ಡ್ರೆಸ್‌ಗಳು ಲಭ್ಯವಿದೆ.

ಶುಭಾರಂಭಗೊಂಡ ಇಂದು ಗ್ರಾಹಕರಿಗೆ ಹಲವು ಬಗೆಯ ವಿಶೇಷ ಆಫರ್‌ಗಳು ಲಭ್ಯವಿದೆ. ಹಾಗೂ ಈ ಮಳಿಗೆಯಿಂದ ಆನ್‌ಲೈನ್ ಡ್ರೆಸ್ ಖರೀದಿ ಸೌಲಭ್ಯವಿದ್ದು, ಬುಕ್ಕಿಂಗ್ ಮಾಡಿದ ಉಡುಪುಗಳನ್ನು ಆಯಾ ವಿಳಾಸಕ್ಕೆ ಮನೆಬಾಗಿಲಿಗೆ ತಲುಪಿಸಿವ ವ್ಯವಸ್ಥೆಯೂ ಇದೆ.

Leave a Reply

Your email address will not be published. Required fields are marked *

error: Content is protected !!