ವಿಟ್ಲ: ದ.ಕ ಬೆಳೆಗಾರರ ಸಾವಯುವ ಸಂಯುಕ್ತ ರೈತ ಉತ್ಪಾದಕರ ಕಂಪೆನಿ ಲಿಮಿಟೆಡ್ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸನ್ಮಾನ ಕಾರ್ಯಕ್ರಮ
ವಿಟ್ಲ: ದಕ್ಷಿಣ ಕನ್ನಡ ಬೆಳೆಗಾರರ ಸಾವಯುವ ಸಂಯುಕ್ತ ರೈತ ಉತ್ಪಾದಕರ ಕಂಪೆನಿ ಲಿಮಿಟೆಡ್ ವತಿಯಿಂದ ವಿಟ್ಲದ ಶಾಖೆಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸನ್ಮಾನ ಕಾರ್ಯಕ್ರಮ ನಡೆಯಿತು.

ನಾಗಸ್ವರ ವಾದಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೋಪಾಲ ಜೋಗಿ ಕಾಪುಮಜಲು ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ
ಡಿ.ಕೆ ಗ್ರೂಪ್ ಆಫ್ ಕಂಪನೀಸ್ ಡಿಕೆಜಿಒಸಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ದಕ್ಷಿಣ ಕನ್ನಡ ಮ್ಯೂಚುವಲ್ ಬೆನಿಫಿಟ್ಸ್ ನಿಧಿ ಲಿಮಿಟೆಡ್ ಸಂಸ್ಥಾಪಕ
ಆಲ್ವಿನ್ ಜೋಯಲ್ ನೊರೊನ್ಹಾ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ
ಅರುಣ್ ವಿಟ್ಲ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ. ಎಸ್. ಮೊಹಮ್ಮದ್, ವಿಠಲ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ, ಬ್ಯುಸಿನೆಸ್ ಪ್ರೊಪ್ರೈಟರ್ ವಿಟ್ಲ ಜನ್ಸಿಟಾ ಫರ್ನಾಂಡೀಸ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮನ್ಮಥ ಶೆಟ್ಟಿ ಪುತ್ತೂರು ಶುಭ ಹಾರೈಸಿದರು.
ಅಧ್ಯಜ್ಷ ವಿ.ಜೆ ಪ್ರನೀತ್, ಉಪಾಧ್ಯಕ್ಷ ಮಹೇಶ್, ವ್ಯವಸ್ಥಾಪಕ ಚೇತನ್ ಕುಮಾರ್ ಪಿ. ಭಾಗವಹಿಸಿದ್ದರು.
ಪವಿತ್ರ. ಕೆ ನಿರೂಪಿಸಿದರು.
ವನಿತಾ. ಕೆ. ವಿ ಸ್ವಾಗತಿಸಿದರು.




