February 3, 2026

ಸುಳ್ಯ: ನ.26 ಮತ್ತು 27ರಂದು ಕನಕಮಜಲಿನ ಕನಕಕಲಾ ಗ್ರಾಮದಲ್ಲಿ ಮೇದಿನಿ ಉತ್ಸವ

0
IMG-20221122-WA0014.jpg

ಸುಳ್ಯ: ಗುರುದೇವ ಲಲಿತಕಲಾ ಅಕಾಡೆಮೆಯ ವತಿಯಿಂದ ಮೂರ್ಜೆ ಮುತ್ತಣ್ಣ ಗೌಡ ಮತ್ತು ಶ್ರೀಮತಿ ನಳಿನಿ ಮುತ್ತಣ್ಣ ಸ್ಮರಣಾರ್ಥ ಗ್ರಾಮೀಣ ಪ್ರದೇಶಗಳಲ್ಲಿ ಶಾಸ್ತ್ರೀಯ ನೃತ್ಯ ಕಲಾ ಪ್ರಕಾರಗಳ ಜಾಗೃತಿಗಾಗಿ ಮೇದಿನಿ ಉತ್ಸವ ಕಾರ್ಯಕ್ರಮವು ನ.26 ಮತ್ತು 27ರಂದು ಕನಕಮಜಲಿನ ಕನಕಕಲಾ ಗ್ರಾಮದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದು, ಮೂರ್ಜೆ ಮೂರ್ಕಜೆ ನಂದರವಂಶ ಒಕ್ಕಲಿಗ ಗೌಡ ತರವಾಡು ಟ್ರಸ್ಟ್ ಅಧ್ಯಕ್ಷ ಕೆ.ಎಸ್ ಗೋಪಾಲಕೃಷ್ಣ ಗೌಡ ಮೂರ್ಜೆ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಇನ್ನು ಮುಖ್ಯ ಅತಿಥಿಗಳಾಗಿ ಪದ್ಮ ಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್, ತಾ.ಪಂ ಮಾಜಿ ಅಧ್ಯಕ್ಷೆ ಶ್ರೀಮತಿ ಗುಣವತಿ ಕೊಲ್ಲಂತಡ್ಕ, ಪುತ್ತೂರು ಎಸ್ ಡಿ ಪಿ ರೆಮಿಡೀಸ್ ಆಂಡ್ ರಿಸರ್ಚ್ ಸೆಂಚರ್ ವ್ಯವಸ್ಥಾಪಕ ನಿರ್ದೇಶಕ ಡಾ. ಹರಿಕೃಷ್ಣ ಪಾಣಾಜೆ, ಕನಕಮಜಲು ಗ್ರಾ.ಪಂ ಅಧ್ಯಕ್ಷ ಶ್ರೀಧರ ಕುತ್ಯಾಳ ಭಾಗವಹಿಸಲಿದ್ದಾರೆ.

ನವಂಬರ್ 27ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಗುರುದೇವ ಲಲಿತಾ ಅಕಾಡೆಮಿಯ ಕಲಾ ನಿರ್ದೇಶಕಿ ಡಾ.ಚೇತನ ರಾಧಾಕೃಷ್ಣ ಪಿ ಎಂ ಅವರು ಅಧ್ಯಕ್ಷತೆ ವಹಿಸಲಿದ್ದು, ಮೂಖ್ಯ ಅತಿಥಿಗಳಾಗಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ, ಗಣೇಶ್ ಕ್ಯಾಶ್ಯೂಸ್ ನ ಶ್ರೀಮತಿ ಪದ್ಮಾವತಿ ಉಪೇಂದ್ರ ಕಾಮತ್, ಜೇನು ಕೃಷಿ ತಜ್ಞ ಕುಮಾರ್ ಪೆರ್ನಾಝೆ, ಕನಕಮಜಲು ಯುವಕ ಮಂಡಲದ ಅಧ್ಯಕ್ಷ ಚಂದ್ರಶೇಖರ ನೆಡಿಲು, ಕನಕಮಜಲು ಸ್ವರ್ಣ ಮಹಿಳಾ ಮಂಡಳಿ ಅಧ್ಯಕ್ಷೆ ಶ್ರೀಮತಿ ಸುಶೀಲ ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!