February 4, 2026

ಭಾರತದ ನೂತನ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಅರುಣ್ ಗೋಯೆಲ್

0
IMG-20221121-WA0046.jpg

ಭಾರತದ ನೂತನ ಚುನಾವಣಾ ಆಯುಕ್ತರಾಗಿ ಮಾಜಿ ಬ್ಯೂರೋಕ್ರಾಟ್ ಅರುಣ್ ಗೋಯೆಲ್ ಅವರು ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ.

ಕಾನೂನು ಮತ್ತು ನ್ಯಾಯ ಸಚಿವಾಲಯವು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರ್ದೇಶನದಂತೆ ಗೋಯೆಲ್ ಅವರ ನೇಮಕವನ್ನು ಸೂಚಿಸಿದ್ದು, ಶನಿವಾರ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಲಾಗಿತ್ತು. ಸಿಇಸಿಯಾಗಿ ಕಳೆದ ಮೇಯಲ್ಲಿ ಸುಶೀಲ್ ಚಂದ್ರ ಅವರು ನಿವೃತ್ತರಾದ ಬಳಿಕ ಖಾಲಿಯಿದ್ದ ಸ್ಥಾನಕ್ಕೆ ಗೋಯೆಲ್ ಅವರ ನೇಮಕವಾಗಿದೆ.

1985ರ ಬ್ಯಾಚ್‌ನ ಪಂಜಾಬ್ ಕೇಡರ್‌ನ ಮಾಜಿ ಐಎಎಸ್ ಅಧಿಕಾರಿಯಾಗಿರುವ ಗೋಯೆಲ್, ದೊಡ್ಡ ಕೈಗಾರಿಕೆಗಳ ಕಾರ್ಯದರ್ಶಿಯಾಗಿ ಶುಕ್ರವಾರದವರೆಗೂ ಸೇವೆಯಲ್ಲಿದ್ದರು. ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಅವರಿಗಿದೆ.

Leave a Reply

Your email address will not be published. Required fields are marked *

error: Content is protected !!