April 9, 2026

ಉಪ್ಪಿನಂಗಡಿ: ಊಟ ಮಾಡಿ ಮಲಗಿದ್ದ ಯುವತಿ ನಾಪತ್ತೆ: ದೂರು ದಾಖಲು

0
IMG-20221121-WA0041.jpg

ಉಪ್ಪಿನಂಗಡಿ : ಇಲ್ಲಿನ ಸಮೀಪದ ಬಾರ್ಯ ಗ್ರಾಮದ ಕುಡುಗುಡ್ಡೆ ಮನೆ ನಿವಾಸಿ ಅಬ್ದುಲ್ ಖಾದ್ರಿ ಎಂಬವರ ಮಗಳು ಸಾಹೀದಾ ಎಂಬಾಕೆ ನ.19ರಂದು ಮಧ್ಯ ರಾತ್ರಿಯಿಂದ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ

ತನ್ನ ಎಂಟು ಮಕ್ಕಳ ಪೈಕಿ ಐದು ಮಂದಿ ಹೆಣ್ಣು ಮಕ್ಕಳಾಗಿದ್ದು, ಇವರ ಪೈಕಿ ಕೊನೆಯವಳಾದ ಸಾಹೀದಾ ಶನಿವಾರ ರಾತ್ರಿ ಊಟ ಮಾಡಿ ಮಲಗಿದಾಕೆ ತಡ ರಾತ್ರಿ 1 ಗಂಟೆ ಸುಮಾರಿಗೆ ಎದ್ದು ನೋಡಿದಾಗ ನಾಪತ್ತೆಯಾಗಿರುವುದು ಕಂಡು ಬಂದಿರುತ್ತದೆ.

ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ನಾಪತ್ತೆಯಾದ ಯುವತಿಯು ಎಲ್ಲಿಯಾದರೂ ಪತ್ತೆಯಾದರೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!