August 13, 2026

ಬಂಟ್ವಾಳ: ಬಾಲಕಿಗೆ ಅಶ್ಲೀಲ ಚಿತ್ರಗಳನ್ನು ಹೊಂದಿರುವ ಮೊಬೈಲ್ ಮೆಮೊರಿ ಕಾರ್ಡ್ ನೀಡಿದ ಆರೋಪ: ಬಂಧಿತ ಆರೋಪಿಗೆ ಜಾಮೀನು ಮಂಜೂರು

0
judge-gavel-with-justice-lawyers-object-documents-working-on-table-legal-law-advice-and-justice_t20_kRJm7P.jpg

ಬಂಟ್ವಾಳ: ಬಾಲಕಿಯೋರ್ವಳಿಗೆ ಅಶ್ಲೀಲ ಚಿತ್ರಗಳನ್ನು ಹೊಂದಿರುವ ಮೊಬೈಲ್ ಮೆಮೊರಿ ಕಾರ್ಡ್ ನೀಡಿದ ಆರೋಪದ ಮೇಲೆ ಬಂಧಿತನಾದ ಆರೋಪಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಬಿಡುಗಡೆಗೊಳಿಸಿದೆ.

ಕಲ್ಲಡ್ಕ ನಿವಾಸಿ ಸಮೀರ್(33) ಎಂಬಾತ ಮಾಣಿ ಸಮೀಪದ ಬುಡೋಳಿಯಲ್ಲಿರುವ ಶ್ರೀ ವಿಷ್ಣು ದಿನಸಿ ಅಂಗಡಿಯೋಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಪ್ರಾಪ್ತ ಬಾಲಕಿಗೆ ಅಶ್ಲೀಲ ಚಿತ್ರಗಳನ್ನು ಹೊಂದಿರುವ ಮೆಮೊರಿ ಕಾರ್ಡ್ ನೀಡಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ದೂರು ದಾಖಲಾಗಿದೆ.

ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದು, ಈ ನಡುವೆ ಆರೋಪಿ ನ್ಯಾಯವಾದಿ ಅಬ್ದುಲ್ ರಹಿಮಾನ್ ಹೀರೆಬಂಡಾಡಿ ಅವರ ಮೂಲಕ
ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.

ಆರೋಪಿಗೆ ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಪೋಸ್ಕೋ ಪ್ರಥಮ ನ್ಯಾಯಾಲಯ ಜಾಮೀನು ನೀಡಿ ಆದೇಶ ಹೊರಡಿಸಿದೆ. ಆರೋಪಿ ಪರವಾಗಿ ನ್ಯಾಯವಾದಿ ಅಬ್ದುಲ್ ರಹಿಮಾನ್ ಹೀರೆಬಂಡಾಡಿ ವಾದಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!