ಮಂಗಳೂರು: ಆಟೋ ರಿಕ್ಷಾದಲ್ಲಿ ಸ್ಪೋಟ: ಚಾಲಕ ಸಹಿತ ಇಬ್ಬರಿಗೆ ಗಾಯ
ಮಂಗಳೂರು: ಮಂಗಳೂರು ನಗರದ ಕಂಕನಾಡಿ ಕಪಿತಾನಿಯೋ ಶಾಲೆ ಬಳಿ ಚಲಿಸುತ್ತಿದ್ದ ಆಟೋ ರಿಕ್ಷಾ ಒಂದರಲ್ಲಿ ಸ್ಪೋಟ ಸಂಭವಿಸಿದ್ದು , ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಆಟೋದಲ್ಲಿ ಚಾಲಕನೊಂದಿಗೆ ಮತ್ತೋರ್ವ ಇದ್ದು ಇಬ್ಬರು ಸ್ಪೋಟದಲ್ಲಿ ಗಾಯಗೊಂಡಿದ್ದು ನಗರದ ಖಾಸಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಬಾಂಬ್ ನಿಷ್ಟ್ರೀಯ ದಳ , ಮತ್ತಿತರ ಜಾಗೃತಾ ದಳದವರು ಘಟನಾ ಸ್ಥಳಕ್ಕೆ ಧಾವಿಸಿದ್ದು ತನಿಖೆ ಆರಂಭಿಸಿದ್ದಾರೆ.
ಒಂದು ಮೂಲ ಪ್ರಕಾರ ಆಟೋದಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿರುವ ಸಾಧ್ಯತೆಗಳಿದ್ದು ಮತ್ತೊಂದು ಮೂಲಗಳ ಪ್ರಕಾರ ಸ್ಪೋಟಕಗಳನ್ನು ಸಾಗಿಸಲಾಗುತ್ತಿತ್ತೆಂದು ಹೇಳಲಾಗುತ್ತಿದೆ.
ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.





