ಕಾಸರಗೋಡು: ಅಪಘಾತಕ್ಕೀಡಾದ ಸ್ಕೂಟರ್‌ನಲ್ಲಿತ್ತು 18 ಕಿಲೋ ಗಾಂಜಾ – ಗಾಡಿ ಸಹಿತ ಆರೋಪಿ ಪೊಲೀಸ್ ವಶಕ್ಕೆ
ಕಾಸರಗೋಡು: ಅಪಘಾತಕ್ಕೀಡಾದ ಸ್ಕೂಟರ್‌ನಿಂದ 18 ಕಿಲೋ ಗಾಂಜಾವನ್ನು ಮಂಜೇಶ್ವರ ಠಾಣಾ ಪೊಲೀಸರು ವಶಡಿಸಿಕೊಂಡಿದ್ದು, ತಮಿಳುನಾಡು ಮೂಲದ ಯುವಕನೋರ್ವನನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ತಮಿಳುನಾಡು ತಿರುವಲ್ಲೂರಿನ ಅಂತೋನಿ ರಾಜು (26) ಎಂದು ಗುರುತಿಸಲಾಗಿದೆ.
ಉಪ್ಪಳದಲ್ಲಿ ಗುರುವಾರ ರಾತ್ರಿ ವಾಹನವೊಂದನ್ನು ಹಿಂದಿಕ್ಕುವ ಭರದಲ್ಲಿ ಸ್ಕೂಟರ್ ಮಗುಚಿ ಬಿದ್ದಿದ್ದು, ಸ್ಥಳೀಯರು ದಾವಿಸಿ ಬಂದು ನೋಡಿದಾಗ ಎರಡು ಗೋಣಿ ಚೀಲಗಳಲ್ಲಿ ತುಂಬಿಸಿ ಸಾಗಿಸುತ್ತಿದ್ದ ಗಾಂಜಾ ಪತ್ತೆಯಾಗಿದ್ದು, ಸ್ಥಳಕ್ಕೆ ಆಗಮಿಸಿದ ಮಂಜೇಶ್ವರ ಪೊಲೀಸರು ಸ್ಕೂಟರ್ ಮತ್ತು ಗಾಂಜಾವನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.





