February 4, 2026

ಕಿನ್ನಿಗೋಳಿ: ಬೈಕ್ ಆಟೋಗೆ ಢಿಕ್ಕಿ, ಬೈಕ್ ಸವಾರ ಸಾವು

0
image_editor_output_image-1316208188-1668748092656.jpg

ಕಿನ್ನಿಗೋಳಿ: ಬೈಕ್ ಸವಾರನೋರ್ವ ಪೆಟ್ರೋಲ್ ಬಂಕ್ ಬಳಿ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾರಿ ಮಧ್ಯೆ ಸಾವನ್ನಪ್ಪಿದ ಘಟನೆ ಮಂಗಳೂರಿನ ಕಿನ್ನಿಗೋಳಿ ಸಮೀಪದ ಪಕ್ಷಿಕೆರೆಯ ಕೊಯಿಕುಡೆ ಪೆಟ್ರೋಲ್ ಬಂಕ್ ಬಳಿ ನಡೆದಿದೆ.

ಮೃತ ಬೈಕ್ ಸವಾರನನ್ನು ಕೋಲ್ನಾಡು ಸಸಿತೋಟ ನಿವಾಸಿ ಶರತ್ ಶೆಟ್ಟಿ (49) ಎಂದು ಗುರುತಿಸಲಾಗಿದೆ.

ಮೃತ ಶರತ್ ಶೆಟ್ಟಿ ಹಳೆಯಂಗಡಿಯ ಸಂಸ್ಥೆಯೊಂದರಲ್ಲಿ ಚಾಲಕನಾಗಿ ದುಡಿಯುತ್ತಿದ್ದು ಕೆಲಸ ಮುಗಿಸಿ ವಾಪಸ್ ಬರುವ ವೇಳೆ ಪಕ್ಷಿಕೆರೆ ಕೊಯಿಕುಡೆ ಪೆಟ್ರೋಲ್ ಬಂಕ್ ಬಳಿ ವಿರುದ್ಧ ದಿಕ್ಕಿನಿಂದ ಬಂದ ಆಟೋಗೆ ಡಿಕ್ಕಿ ಹೊಡೆದಿದ್ದಾರೆ.

ಅಪಘಾತದ ರಭಸಕ್ಕೆ ಶರತ್ ಶೆಟ್ಟಿಯವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!