March 20, 2026

ವಿಟ್ಲ: ಆಟೋ ಚಾಲಕನ ಮೇಲೆ ತಲವಾರ್ ದಾಳಿ ಪ್ರಕರಣ: ಸಾದಿಕ್ ಅಲಿಯಾಸ್ ಕುಂಡ ಸಾಧಿಕ್ ಸಹಿತ ಮೂವರ ಮೇಲೆ ಪ್ರಕರಣ

0
IMG-20221114-WA0106

ವಿಟ್ಲ: ಬೋಳಂತೂರು ಗ್ರಾಮದ ಮದಕ ಎಂಬಲ್ಲಿ ಆಟೋ ಚಾಲಕನ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ. ನಾಲ್ಕು ವರ್ಷಗಳ ಹಿಂದಿನ ದ್ವೇಷವೇ ಈ ಘಟನೆಗೆ ಕಾರಣವೆನ್ನಲಾಗಿದೆ.‌

ಬೋಳಂತೂರು ಗ್ರಾಮದ ನಾಡಾಜೆ ನಿವಾಸಿ, ಆಟೋ ಚಾಲಕ ಶಾಕೀರ್‌ ಹಲ್ಲೆಗೊಳಗಾದ ಯುವಕ. ಸಾದೀಕ್‌ @ ಕುಂಡ ಮತ್ತು ಇತರ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

ಸಾಕೀರ್ ರಾತ್ರಿ ರಿಕ್ಷಾದಲ್ಲಿ ಸ್ನೇಹಿತರಾದ ಆರೀಸ್,ಶಕೀರ್ ಕಲ್ಪನೆ ಮತ್ತು ಚೈರ್ ಮುರ ಮನೆರೊಂದಿಗೆ ಪುಂಜಾಲಕಟ್ಟೆಯಲ್ಲಿ ನಡೆದ ಕಬ್ಬಡಿ ಮ್ಯಾಚ್ ಮುಗಿಸಿ ಕೊಕ್ಕಪುಣಿ ಎಂಬಲ್ಲಿ ಗೆಳೆರನ್ನು ಇಳಿಸಿ ತನ್ನ ಮನೆಯಾದ ನಾಡಾಜೆ ಕಡೆಗೆ ರಿಕ್ಷಾ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಬೊಳಂತೂರು ಗ್ರಾಮದ ಮದಕ ಎಂಬಲ್ಲಿ ತಲುಪಿದಾಗ ಮೂರು ಜನ ನಿಂತಿದ್ದು ಅವರಲ್ಲಿ ಒರ್ವ ರಿಕ್ಷಾದ ಗ್ಲಾಸ್‌ಗೆ ಟಾರ್ಚ್ ಲೈಟ್ ಬೆಳಕು ಹಾಯಿಸಿದ್ದು ಆದರಿಂದಾಗಿ ರಿಕ್ಷಾವನ್ನು ನಿಧಾನಿಸಿ ಮುಂದೆ ಹೋದಾಗ ಮೂರು ಜನ ಸೇರಿ ರಿಕ್ಷಾವನ್ನು ಅಡ್ಡಗಟ್ಟಿ ನಿಲ್ಲಿಸಿದ್ದು. ಆ ಮೂವರಲ್ಲಿ ಓರ್ವ ಪರಿಚಯದ ಸಾಧಿಕ್ @ಕುಂಡ ಎಂಬವನು ನನ್ನ ಮೇಲೆ ನೀನು ಹಾಗೂ ನಿನ್ನ ಅಣ್ಣ ಸೇರಿಕೊಂಡು ಕೇಸು ಮಾಡಿದ್ದೀರಾ ಸುಮಾರು ಸಮಯದಿಂದ ನೀನು ಒಬ್ಬನೇ ಸಿಗುವುದನ್ನು ಕಾಯುತ್ತಿದ್ದು ಇವತ್ತು ಸಿಕ್ಕಿದ್ದೀಯಾ, ನಿನ್ನನ್ನು ಒಂದು ಕೈ ನೋಡುತ್ತೇನೆ ” ಎಂದು ಹೇಳಿ ತಲವಾರು ರೀತಿಯ ಆಯಧವನ್ನು ತೋರಿಸಿ ಅದರಿಂದ ಕಡಿದಿದ್ದಾನೆ. ನಾಲ್ಕು ವರ್ಷದ ಹಿಂದೆ ಶಾಕೀರ್ ನ ದೊಡ್ಡಪ್ಪನ ಮಗ ರಫೀಕ್ ನಿಗೂ ಆರೋಪಿ ಸಾಧಿಕನಿಗೂ ಆದ ಗಲಾಟೆಯ ವಿಚಾರದಲ್ಲಿ ಶಾಕೀರ್ ರಫೀಕ್ ನ ಪರವಾಗಿದ್ದ ವಿಚಾರವೆ ಈ ಕೃತ್ಯಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *

error: Content is protected !!