ಹಾಲಿನ ದರ ಏರಿಕೆಗೆ ಸಿಎಂ ತಡೆ: ಸಭೆ ಬಳಿಕ ತೀರ್ಮಾನ ಎಂದ ಬೊಮ್ಮಾಯಿ
ಬೆಂಗಳೂರು: ನಂದಿನಿ ಹಾಲಿನ ದರ ಹೆಚ್ಚಳಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಡಿಡೀರ್ ತಡೆ ನೀಡಿದ್ದಾರೆ.
ಈ.ಕುರಿತು ಮಾಹಿತಿ ನೀಡಿರುವ ಸಿಎಂ, ಹಾಲಿನ ದರ ಏರಿಕೆ ಬಗ್ಗೆ ನ. 20ರ ನಂತರ ತೀರ್ಮಾನ ಕೈಗೊಳ್ಳಲಾಗುವುದು.ಕೆಎಂಎಫ್ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಬಳಿಕ ತೀರ್ಮಾನ ಕೈಗೊಳ್ಳಲಾಗುತ್ತಿದೆ ಎಂದರು.
ಇನ್ನು ಶಿಘ್ರದಲ್ಲೇ ಹಾಲಿನ ದರ ಪರಿಷ್ಕರಣೆ ಮಾಡಲಾಗುವುದು ಎಂದು ಇತ್ತೀಚೆಗಷ್ಟೇ ಕೆಎಂಎಫ್ ಅಧ್ಯಕ್ಷ ಹಾಗೂ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದರು.
ಅದರಂತೆಯೇ ನಿನ್ನೆ ಸೋಮವಾರ ಮಧ್ಯರಾತ್ರಿಯಿಂದಲೇ ಪ್ರತಿ ಲೀಟರ್ ಹಾಲಿನ ಬೆಲೆ 3 ರೂಪಾಯಿ ಹೆಚ್ಚಳ ಎಂದು ಮಹಾಮಂಡಳಿ ಗ್ರಾಹಕರಿಗೆ ಶಾಕ್ ನೀಡಿತ್ತು.
ಆದ್ರೆ ಮುಖ್ಯಮಂತ್ರಿಗಳ ಗಮನಕ್ಕೆ ಬಾರದೇ ಈ ನಿರ್ಧಾರ ಕೈಗೊಂಡಿದ್ದರಿಂದ ಸಿಎಂ ತಡೆ ನೀಡಿದ್ದಾರೆ ಎನ್ನಲಾಗಿದೆ.





