ಉಡುಪಿ: ಕರ್ಣಾಟಕ ಬ್ಯಾಂಕಿನ ಲೀಗಲ್ ಆಫೀಸರ್‌ನ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆ
ಉಡುಪಿ: ಮನೆಯ ಮಹಡಿಯ ಕೊಠಡಿಯಲ್ಲಿ ಬ್ಯಾಂಕಿನ ಉದ್ಯೋಗಿಯೊಬ್ಬರು ಬೆಂಕಿಯಿಂದ ಸುಟ್ಟು ಮೃತಪಟ್ಟ ಘಟನೆ ಸೋಮವಾರ ನಗರದ ವಾದಿರಾಜ ರಸ್ತೆ ಬಳಿ ನಡೆದಿದೆ.
ಮೃತರನ್ನು ಕರ್ಣಾಟಕ ಬ್ಯಾಂಕಿನ ಲೀಗಲ್ ಆಫೀಸರ್, ವಾದಿರಾಜ ರಸ್ತೆಯ ನಿವಾಸಿ ರಾಜಗೋಪಾಲ್ ಸಾಮಗ(42) ಎಂದು ಗುರುತಿಸಲಾಗಿದೆ.
ಇವರು ನಿವೃತ್ತ ಪೊಲೀಸ್ ಕೃಷ್ಣ ಸಾಮಗ ಅವರ ಪುತ್ರ. ಇವರ ಪತ್ನಿ ಕೆನರಾ ಬ್ಯಾಂಕಿನ ಉದ್ಯೋಗಿಯಾಗಿದ್ದಾರೆ. ಇವರಿಗೆ ಒಂದೂವರೆ ವರ್ಷದ ಪುತ್ರನಿದ್ದಾನೆ.
ಕರ್ಣಾಟಕ ಬ್ಯಾಂಕಿನ ಹೈದರಾಬಾದ್ ಶಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇವರು, ಕೆಲವು ಸಮಯಗಳ ಹಿಂದೆ ಮಂಗಳೂರಿಗೆ ವರ್ಗಾವಣೆಗೊಂಡಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.




