March 20, 2026

ಕಾಸರಗೋಡು: ಚಲಿಸುತ್ತಿದ್ದ ಬೈಕ್‌‌ನ ಟಯರ್ ಬೇರ್ಪಟ್ಟು ಅಪಘಾತ – ಸವಾರ ಮೃತ್ಯು

0
IMG-20221114-WA0042.jpg

ಕಾಸರಗೋಡು: ಚಲಿಸುತ್ತಿದ್ದ ಬೈಕ್‌‌ನ ಟಯರ್ ಬೇರ್ಪಟ್ಟು ಉಂಟಾದ ಅಪಘಾತದಲ್ಲಿ ಸವಾರ ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ಮುನ್ನಾಡ್ ನಲ್ಲಿ ನಡೆದಿದೆ.

ಮೃತಪಟ್ಟವರನ್ನು ಮುನ್ನಾಡ್ ತೋರ್ಕುಲದ ಕೆ.ಸುಧೀಶ್ (28) ಎಂದು ಗುರುತಿಸಲಾಗಿದೆ.

ಸ್ನೇಹಿತ ಶರತ್ ಜೊತೆ ತೆರಳುತ್ತಿದ್ದಾಗ ಬೈಕ್‌‌ನ ಹಿಂಬದಿ ಚಕ್ರ ಬೇರ್ಪಟ್ಟಿದ್ದು, ಹಿಂದುಗಡೆ ಕುಳಿತ್ತಿದ್ದ ಸುಧೀಶ್ ರಸ್ತೆ ಗೆಸೆಲ್ಪಟ್ಟಿದ್ದು, ಗಂಭೀರ ಗಾಯಗೊಂಡ ಅವರನ್ನು ಪರಿಯಾರಂನ ವೈದ್ಯಕೀಯ ಕಾಲೇಜು ಆಸ್ಪತ್ರಗೆ ಕೊಂಡೊಯ್ದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಬೈಕ್ ಚಲಾಯಿಸಿದ ಶರತ್ ಅವರಿಗೂ ಗಾಯಗಳಾಗಿವೆ. ಬೇಡಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!