February 1, 2026

ಚುನಾವಣೆಗೆ ಟಿಕೆಟ್ ನಿರಾಕರಿಸಿದ್ದಕ್ಕೆ ಟವರ್ ಹತ್ತಿ ಕುಳಿತ ಮಾಜಿ ಕೌನ್ಸಿಲರ್

0
IMG-20221113-WA0012.jpg

ನವದೆಹಲಿ: ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಟಿಕೆಟ್‌ ನಿರಾಕರಿಸಿದ್ದರಿಂದ ಮಾಜಿ ಎಎಪಿ ಕೌನ್ಸಿಲರ್ ಟ್ರಾನ್ಸ್‌ ಮಿಷನ್ ಟವರ್ ಹತ್ತಿದ ಘಟನೆ ನಡೆದಿದೆ.

ಆಮ್ ಆದ್ಮಿ ಪಕ್ಷದ ಮಾಜಿ ಕೌನ್ಸಿಲರ್‌ ಹಸೀಬ್‌ ಉಲ್‌ ಹಸನ್‌ ಭಾನುವಾರ ಶಾಸ್ತ್ರಿ ಪಾರ್ಕ್‌ ಮೆಟ್ರೊ ನಿಲ್ದಾಣದ ಬಳಿಯ ಟ್ರಾನ್ಸ್‌ಮಿಷನ್‌ ಟವರ್‌ ಏರಿದ್ದು, ಸ್ಥಳೀಯರು, ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಪರಿಸ್ಥಿತಿಯನ್ನು ನಿಯಂತ್ರಿಸಲು ಸ್ಥಳಕ್ಕೆ ಧಾವಿಸಿದ್ದಾರೆ ಎನ್ನಲಾಗಿದೆ.

ಇನ್ನು ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್‌ಗೆ ಡಿಸೆಂಬರ್ 4 ರಂದು ನಡೆಯಲಿರುವ ಚುನಾವಣೆಗೆ ಆಮ್ ಆದ್ಮಿ ಪಕ್ಷವು ತನ್ನ 117 ಅಭ್ಯರ್ಥಿಗಳ ಎರಡನೇ ಮತ್ತು ಅಂತಿಮ ಪಟ್ಟಿಯನ್ನು ಶನಿವಾರ ಪ್ರಕಟಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!