ವಿಟ್ಲ: ಲಯನ್ಸ್ ಕ್ಲಬ್, ಆಟೋ ರಿಕ್ಷಾ ಚಾಲಕರ ಸಂಘದ ವತಿಯಿಂದ ನ.13ರಂದು ವಾಹನ ಸಂಚಾರ ಹಾಗೂ ನಿರ್ವಹಣೆ ಬಗ್ಗೆ ಜನಜಾಗೃತಿ ಕಾರ್ಯಕ್ರಮ
ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಸಿಟಿ ಮತ್ತು ಆಟೋ ರಿಕ್ಷಾ ಚಾಲಕರ ಸಂಘ ವಿಟ್ಲ ಇದರ ಜಂಟಿ ನೇತೃತ್ವದಲ್ಲಿ ನವಂಬರ್ 13ರಂದು ಸಂಜೆ 4 ಗಂಟೆಗೆ ಸುವರ್ಣರಂಗ ಮಂದಿರ ವಿಠಲ ಪದವಿ ಪೂರ್ವ ಕಾಲೇಜ್ ವಿಟ್ಲದಲ್ಲಿ ವಾಹನ ಸಂಚಾರ ಹಾಗೂ ನಿರ್ವಹಣೆ ಬಗ್ಗೆ ಜನಜಾಗೃತಿ ಹಾಗೂ ಆಟೋರಿಕ್ಷ ಚಾಲಕರ ಸಂಘದ ಮಾಜಿ ಅಧ್ಯಕ್ಷರುಗಳಿಗೆ ಹಾಗೂ ಲಯನ್ ಕ್ಲಬ್ ನ ಪ್ರಾಂತೀಯ ಏಳರ ಅಧ್ಯಕ್ಷರಿಗೆ ಸನ್ಮಾನಿಸುವ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮವು ಲಯನ್ಸ್ ಕ್ಲಬ್ ವಿಟ್ಲ ಸಿಟಿ ಯ ಅಧ್ಯಕ್ಷರು ಹಾಗೂ ಆಟೋ ರಿಕ್ಷಾ ಚಾಲಕರ ಸಂಘದ ಗೌರವ ಅಧ್ಯಕ್ಷ ಬಿ ಸಂದೇಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ವಿಠಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎ ಎಸ್ ಆದರ್ಶ ಅವರು ದೀಪ ಬೆಳಗಿಸುವುದರ ಮುಖಾಂತರ ಉದ್ಘಾಟಿಸಲಿದ್ದಾರೆ.
ಇನ್ನು ವಿಟ್ಲ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಶ್ರೀ ನಾಗರಾಜ್ ಎಚ್. ಇ. ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದು, ದಿಕ್ಸೂಚಿ ಭಾಷಣ ಮಾಡಲಿದ್ದಾರೆ.





