February 3, 2026

ಮನೆಯ ತೋಟದ ಬಾವಿಯಲ್ಲಿನ ಮೀನುಗಳಿಗೆ ಆಹಾರ ಹಾಕುವಾಗ ಬಾವಿಗೆ ಬಿದ್ದ ವಿದ್ಯಾರ್ಥಿನಿ

0
image_editor_output_image1865373480-1668057781488.jpg

ಮಸ್ಕಿ : ಮನೆಯ ತೋಟದ ಬಾವಿಯಲ್ಲಿನ ಮೀನುಗಳಿಗೆ ಆಹಾರ ಹಾಕಲು ಹೋದ ವಿದ್ಯಾರ್ಥಿನಿಯೊಬ್ಬಳು ಬಾವಿಗೆ ಬಿದ್ದು ಮೃತಪಟ್ಟ ಘಟನೆ ತಾಲ್ಲೂಕು ಕುಣಿಕೆಲ್ಲೂರು ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.

ಮೃತ ವಿದ್ಯಾರ್ಥಿನಿ ಮೇಗಾ ಅರಳಹಳ್ಳಿ (18) ಎಂದು ಗುರುತಿಸಲಾಗಿದೆ.

ಬಾವಿಯಲ್ಲಿ ಬಿದ್ದ ವಿದ್ಯಾರ್ಥಿನಿಯ ಶವ ಹೊರ ತೆಗೆಯಲು ಲಿಂಗಸುಗೂರಿನ ಆಗ್ನಿ ಶಾಮಕ ಸಿಬ್ಬಂದಿ ಹಾಗೂ ಮಸ್ಕಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇದುವರೆಗೂ ಶವ ದೊರಕಿಲ್ಲ.

ರಾತ್ರಿ ಮನೆಯಲ್ಲಿ ಊಟದವಾದ ನಂತರ ಉಳಿದ ಮುಸೂರಿಯನ್ನು ಮೀನಿಗೆ ಹಾಕಲು ಬಾವಿಗೆ ಇಳಿದ ಸಂದರ್ಭದಲ್ಲಿ ಕಾಲು ಜಾರಿ ವಿದ್ಯಾರ್ಥಿನಿ ಮೇಘಾ ಬಾವಿಗೆ ಬಿದ್ದಿದ್ದಾಳೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ವಿದ್ಯಾರ್ಥಿನಿ‌ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Leave a Reply

Your email address will not be published. Required fields are marked *

error: Content is protected !!