ವಿಟ್ಲ: ಕೆಲಸದ ಸಂದರ್ಶನಕ್ಕೆ ತೆರಳಿದ್ದ ಯುವತಿ ನಾಪತ್ತೆ
ವಿಟ್ಲ: ಮಂಗಳೂರಿನಲ್ಲಿ ಇಂಟರ್ ವ್ಯೂಹ್ ಇದೆ ಹೋದ ಯುವತಿಯೋರ್ವಳು ನಾಪತ್ತೆಯಾದ ಬಗ್ಗೆ ವರದಿಯಾಗಿದೆ.
ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಕಂಬಳಬೆಟ್ಟು ನಿವಾಸಿ ದಿ.ಆನಂದ ಅವರ ಪುತ್ರಿ ಸುಶ್ಮಿತ ( 21) ನಾಪತ್ತೆಯಾದ ಯುವತಿ.
ನ.8 ರಂದು ಮಂಗಳವಾರ ಬೆಳಿಗ್ಗೆ ಮನೆಯಿಂದ ಮಂಗೂರಿನಲ್ಲಿ ಕೆಲಸವೊಂದರ ಇಂಟರ್ ವ್ಯೂಹ್ ಇದೆ ಮನೆಯಿಂದ ಹೋದವಳು ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ ವಿಟ್ಲ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.


