ಸುಳ್ಯ: ಫಾರೆಸ್ಟ್ ವಾಚರ್ ಆಕಸ್ಮಿಕವಾಗಿ ಹೊಳೆಗೆ ಬಿದ್ದು ಸಾವು
ಸುಳ್ಯ: ತಾಲೂಕಿನ ತೊಡಿಕಾನ ಗ್ರಾಮದ ಸಮೀಪದ ಕೊಡಗು ಜಿಲ್ಲೆಗೆ ಸೇರಿದ ಪಾರೆಸ್ಟ್ ವಾಚರ್ ಆಕಸ್ಮಿಕವಾಗಿ ಹೊಳೆಗೆ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ಸಂಜೆ ತೊಡಿಕಾನ ಗಡಿಭಾಗದ ಮಾವಿನಕಟ್ಟೆ ನರುವೋಳು ಮೊಟ್ಟೆ ಬಳಿ ನಡೆದಿದೆ.
ಮೃತಪಟ್ಟ ಫಾರೆಸ್ಟ್ ವಾಚರ್ ಚಿನ್ನಪ್ಪ (58 ವರ್ಷ ) ಎಂದು ಗುರುತಿಸಲಾಗಿದೆ.
ಕೊಡಗು ಅರಣ್ಯ ಇಲಾಖೆಯಿಂದ ಭೂಮಿಯ ಸರ್ವೆಗೆ ಹೋದ ಸಂದರ್ಭ ತೊಡಿಕಾನ ಸಮೀಪದ ಮಾವಿನಕಟ್ಟೆ ನರುವೋಳು ಮೊಟ್ಟೆ ಎಂಬಲ್ಲಿ ಹೊಳೆ ಬದಿಯಲ್ಲಿ ನೀರು ಕುಡಿಯಲು ಪ್ರಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯ ಬಳಿಕ ತಿಳಿದು ಬರಬೇಕಾಗಿದೆ.




