March 20, 2026

ವಿಟ್ಲ: ತಾಯಿ ಮತ್ತು ಸಹೋದರರ ಮೇಲೆ ಮಾರಣಾಂತಿಕ ಹಲ್ಲೆ:
ಇಬ್ಬರು ಆಸ್ಪತ್ರೆಗೆ ದಾಖಲು

0
IMG-20221108-WA0012.jpg

ವಿಟ್ಲ: ವ್ಯಕ್ತಿಯೋರ್ವ ಆತನ ಅಣ್ಣ ಮತ್ತು ತಾಯಿ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ ಘಟನೆ ಅಳಿಕೆಗ್ರಾಮದ ನೆಗಳಗುಳಿ ಎಂಬಲ್ಲಿ ನಡೆದಿದೆ.

ಅಳಿಕೆ ನೆಗಳಗುಳಿ ನಿವಾಸಿ ಕೃಷ್ಣ ಕುಮಾರ್ ಮತ್ತು ಆತನ ತಾಯಿ ವಾರಿಜ ಹಲ್ಲೆಗೊಳಗಾಗಿದ್ದು, ಕೃಷ್ಣ ಕುಮಾರ್ ಅವರ ಸಹೋದರ ಹರೀಶ್ ಎಂಬವರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಕುಡಿತ ಮತ್ತಿನಲ್ಲಿ ಹರೀಶ್ ಈ ಗಲಾಟೆ ನಡೆಸಿದ್ದಾನೆ ಎನ್ನಲಾಗುತ್ತಿದ್ದು, ಹಲ್ಲೆಗೊಳಗಾದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!