ವಿಟ್ಲ: ಪೆಟ್ರೋಲ್ ಸುರಿದು ನಡೆಯಿತಾ ಯುವಕನ ಕೊಲೆ? ಓರ್ವನ ಬಂಧನ, ಪೊಲೀಸರಿಂದ ವಿಚಾರಣೆ
ವಿಟ್ಲ: ಪೆಟ್ರೋಲ್ ಸುರಿದು ಯುವಕನನ್ನು ಕೊಲೆ ಮಾಡಿದ್ದೇನೆ ಎಂದು ಹೇಳಿದ್ದ ವ್ಯಕ್ತಿಯೋರ್ವನನ್ನು ವಿಟ್ಲ ಪೋಲೀಸರು ಬಂಧಿಸಿದ್ದು ವಿಚಾರಣೆ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಭಾನುವಾರ ರಾತ್ರಿ ಯುವಕನೋರ್ವನನ್ನು ಕಿಡ್ನಾಪ್ ಮಾಡಿ ಬಳಿಕ ಕೊಲೆ ಮಾಡಲಾಗಿದೆ ಎಂಬ ಸುದ್ದಿ ಸೋಮವಾರ ಬೆಳಿಗ್ಗೆಯಿಂದ ಹರಡಿದ್ದು, ಇದು ವದಂತಿಯೋ ಅಥವಾ ಸತ್ಯ ವಿಚಾರವೋ ಎಂದು ಗೊತ್ತಿಲ್ಲದೆ ಪೋಲೀಸರು ಹೇಳಿಕೆ ನೀಡಿದ ವ್ಯಕ್ತಿಗಾಗಿ ಬಲೆ ಬೀಸಿದ್ದರು.
ಇನ್ನು ಕೊನೆಗೂ ಕೊಲೆ ಮಾಡಿದ್ದೇನೆ ಎಂದು ಹೇಳಿದ್ದ ವ್ಯಕ್ತಿ ಬೋಳಂತರೂ ನಿವಾಸಿ ಎಂಬ ಮಾಹಿತಿ ಆಧಾರದ ಮೇಲೆ ವ್ಯಕ್ತಿಯೋರ್ವನನ್ನು ವಿಟ್ಲ ಪೋಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬೊಳಂತರೂ ನಿವಾಸಿ ಅದ್ದು ಯಾನೆ ಅದ್ರಾಮ ಎಂದು ಹೇಳಲಾಗುತ್ತಿದ್ದು ಆತನನ್ನು ಪೋಲೀಸರು ವಶಕ್ಕೆ ಪಡೆದುಕೊಂಡು ಬಳಿಕ ವಿಚಾರಣೆಯ ವೇಳೆ ಆತ ಕೊಲೆ ಮಾಡಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಇನ್ನು ಕಳೆದ ಎರಡು ದಿನಗಳಿಂದ ಬೊಳಂತೂರು ನಿವಾಸಿ ಯುವಕನೋರ್ವ ನಾಪತ್ತೆಯಾಗಿದ್ದಾನೆ ಎಂಬ ದೂರು ಕೇಳಿಬಂದಿದ್ದು, ಅ ಯುವಕನನ್ನೇ ಕೊಲೆ ಮಾಡಲಾಗಿದೆಯಾ ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ.





