February 3, 2026

ಉಡುಪಿ: ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಆರೋಪಿಯ ಬಂಧನ

0
image_editor_output_image698902147-1667791198237.jpg

ಉಡುಪಿ : ಮೊಬೈಲ್ ಅಂಗಡಿ ಕಳವು ಪ್ರಕರಣದ ಆರೋಪಿಯನ್ನು ಹಿರಿಯಡ್ಕ ಜೈಲಿಗೆ 15 ದಿನಗಳ ಹಿಂದೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದು ಇದೀಗ ಆತನನ್ನು ಮುಂಬೈಯಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮುಹಮ್ಮದ್ ರಾಹೀಕ್(22) ಬಂಧಿತ ಆರೋಪಿ.

ಕುಂದಾಪುರ ನಗರ ಠಾಣೆ ವ್ಯಾಪ್ತಿಯ ಬೀಜಾಡಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿಯ ಮೊಬೈಲ್ ಅಂಗಡಿಯಲ್ಲಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹೀಕ್‌ನನ್ನು ಕುಂದಾಪುರ ಪೊಲೀಸರು ಅ.19ರಂದು ಬಂಧಿಸಿದ್ದರು. ಅ.20 ರಂದು ಆತನನ್ನು ಕುಂದಾಪುರದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಅದರಂತೆ ಆರೋಪಿಯನ್ನು ಹೆಡ್‌ಕಾನ್ಸ್‌ಟೇಬಲ್ ಮಂಜುನಾಥ್ ಹಾಗೂ ಸಿಬ್ಬಂದಿ ಬಸನಗೌಡ ಕುಂದಾಪುರದಿಂದ ಹೊರಟು ರಾತ್ರಿ 8.25ಕ್ಕೆ ಹಿರಿಯಡ್ಕ ಅಂಜಾರು ಕಾಜರಗುತ್ತು ಎಂಬಲ್ಲಿರುವ ಜಿಲ್ಲಾ ಕಾರಾಗೃಹದ ಮುಖ್ಯ ದ್ವಾರದ ಬಳಿ ತಲುಪಿ ವಾಹನ ನಿಲ್ಲಿಸಿದ್ದರು. ಜೀಪಿನಿಂದ ಇಳಿಯುತ್ತಿದ್ದ ಆರೋಪಿ ರಾಹೀಕ್ ಪೊಲೀಸರನ್ನು ತಳ್ಳಿ, ಹೊಟ್ಟೆಗೆ ಹೊಡೆದು ದೂಡಿ ಹಾಕಿ ಕಾಡಿನ ಕಡೆ ಓಡಿ ಪರಾರಿಯಾಗಿದ್ದನು.

Leave a Reply

Your email address will not be published. Required fields are marked *

error: Content is protected !!