March 22, 2026

ವಿಟ್ಲ: ಹೊರೈಝನ್ ಶಾಲೆಯಲ್ಲಿ ಮೀಲಾದ್ ಫೆಸ್ಟ್

0
IMG-20221106-WA0041.jpg

ವಿಟ್ಲ: ವಿಟ್ಲ ಕೇಂದ್ರ ಜುಮಾ ಮಸೀದಿ ಅಧೀನದ ಹೊರೈಝನ್ ಪಬ್ಲಿಕ್ ಸ್ಕೂಲ್ ನಲ್ಲಿ ಮೀಲಾದ್ ಫೆಸ್ಟ್ ಅಧ್ಯಕ್ಷ ಝುಬೈರ್ ಮಾಸ್ಟರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭ ವಿಧ್ಯಾರ್ಥಿಗಳಿಂದ ವಿವಿಧ ಸ್ಪರ್ಧೆಗಳು, ಬುರ್ದಾ, ದಫ್ ಮೊದಲಾದ ಕಾರ್ಯಕ್ರಮಗಳು ನಡೆದುವು.

ಮಸೀದಿ ಖತೀಬ್ ಮಹಮ್ಮದ್ ನಸೀಹ್ ದಾರಿಮಿ ದುವಾದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಾಲೆಯ ಉಪಾಧ್ಯಕ್ಷ ವಿ.ಕೆ.ಎಂ.ಅಶ್ರಫ್, ಕಾರ್ಯದರ್ಶಿ ಅಬೂಬಕರ್ ನೋಟರಿ, ಸಂಚಾಲಕ ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಕೋಶಾಧಿಕಾರಿ ವಿ.ಎಚ್.ಅಶ್ರಫ್, ಮೇಲ್ವಿಚಾರಕ ಗಫೂರ್ ಪೊನ್ನೊಟು, ಟ್ರಸ್ಟಿಗಳಾದ ಅಬ್ದುಲ್ ರಹಿಮಾನ್ ದೀಪಕ್, ಅಂದುಞಿ ಗಮಿ, ಇಕ್ಬಾಲ್ ಮೇಗಿನಪೇಟೆ, ಅಬ್ದುಲ್ ಆಝೀಝ್ ಹಳೆಮನೆ, ಮುಸ್ತಫಾ ಖಲೀಲ್, ಅಬ್ದುಲ್ ರಹಿಮಾನ್ ದೀಪಕ್, ಮುಖ್ಯ ಶಿಕ್ಷಕ ಮನಾಝಿರ್ ಮುಡಿಪು, ಸುರಕ್ಷಾ ಸಮಿತಿಯ ಅಬೂಬಕರ್ ಅನಿಲಕಟ್ಟೆ, ಮಸೀದಿ ಅಧ್ಯಕ್ಷ ಇಕ್ಬಾಲ್ ಶೀತಲ್, ಕಾರ್ಯದರ್ಶಿ ಹಮೀದ್ ಬದ್ರಿಯಾ, ಕೋಶಾಧಿಕಾರಿ ಶೆರೀಫ್ ಪೊನ್ನೋಟು, ಇಸ್ಮಾಯಿಲ್ ಪರ್ತಿಪ್ಪಾಡಿ, ಸದರ್ ಉಮರ್ ಸ‌ಅದಿ ಮುಂತಾದದವರು ಉಪಸ್ಥಿತರಿದ್ದರು.
ಉಮ್ಮರ್ ದಾರಿಮಿ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

error: Content is protected !!