March 22, 2026

ಮಂಗಳೂರು: ಲಾರಿ ಹಾಗೂ ಸ್ಕೂಟರ್ ನಡುವೆ ಅಪಘಾತ: ಇಬ್ಬರು ಮೃತ್ಯು, ಇಬ್ಬರು ಗಂಭೀರ

0
Picsart_22-11-06_12-33-29-463.jpg

ಮಂಗಳೂರು: ಲಾರಿ ಹಾಗೂ ಸ್ಕೂಟರ್ ನಡುವೆ ಉಂಟಾದ ಅಪಘಾತವೊಂದರಲ್ಲಿ ಇಬ್ಬರು ಮೃತಪಟ್ಟು ಮತ್ತಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಮಂಗಳೂರು ಹೊರವಲಯದ ನೇತ್ರಾವತಿ ಸೇತುವೆ ಸಮೀಪದ ಕಲ್ಲಾಪು ಎಂಬಲ್ಲಿ ನಡೆದಿದೆ.

ಜಪ್ಪಿನಮೊಗರು ನಿವಾಸಿ ಗಂಗಾಧರ (45) ಹಾಗೂ ಪಜೀರು ನಿವಾಸಿ ನೇತ್ರಾವತಿ(48) ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಮಕ್ಕಳಾದ ಮೋಕ್ಷ (4) ಹಾಗೂ ನೇತ್ರಾವತಿಯ ಅಕ್ಕನ ಮಗನಾದ ಜ್ಞಾನೇಶ್ (6) ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಲ್ಲಾಪು ಮಾರ್ಕೆಟ್ ನಿಂದ ಬಂದ ಲಾರಿಯ ಚಾಲಕನ ನಿರ್ಲಕ್ಷ್ಯತನದಿಂದ ಅಪಘಾತ ಸಂಭವಿಸಿದೆ. ಲಾರಿ ಚಾಲಕ ಹನೀಫ್ ಎಂಬಾತನನ್ನು ಸದ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!