ಪುತ್ತೂರು: ನಿಯಂತ್ರಣ ತಪ್ಪಿ ಆಟೋ ರಿಕ್ಷಾ ಪಲ್ಟಿ
ಪುತ್ತೂರು: ನಿಯಂತ್ರಣ ತಪ್ಪಿ ಆಟೋ ರಿಕ್ಷಾವೊಂದು ಪಲ್ಟಿಯಾದ ಘಟನೆ ಬಲ್ನಾಡು ಗ್ರಾಮದ ಬೆಳಿಯೂರು ಕಟ್ಟೆ ಕಾಡ್ಲ ವಿಷ್ಣುಮೂರ್ತಿ ದೈವಸ್ಥಾನದ ಸಮೀಪ ನಡೆದಿದೆ.
ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಪುತ್ತೂರು ಮೂಲದ ಆಟೋ ರಿಕ್ಷಾವು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಘಟನೆಯಿಂದಾಗಿ ಆಟೋ ಚಾಲಕ ಮತ್ತು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.






