ನೆಲ್ಯಾಡಿ: ಪಿಎಫ್ಐ ಮುಖಂಡನ ಮನೆಗೆ ಎನ್ಐಎ ದಾಳಿ, ಪರಿಶೀಲನೆ
ಉಪ್ಪಿನಂಗಡಿ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಎನ್.ಐ.ಎ ಅಧಿಕಾರಿಗಳ ತಂಡ ನೆಲ್ಯಾಡಿ ಸಮೀಪದ ಶಾಂತಿಬೆಟ್ಟು ನಿವಾಸಿ ಸಾದಿಕ್ ಎಂಬವರ ಮನೆಗೆ ನ.5 ರಂದು ಬೆಳಿಗ್ಗೆ ದಾಳಿ ನಡೆಸಿದೆ.
ಕೌಕ್ರಾಡಿ ಗ್ರಾಮದ ಶಾಂತಿಬೆಟ್ಟು ಎಂಬಲ್ಲಿರುವ ಸಾದಿಕ್ ಮನೆಗೆ ದಾಳಿ ನಡೆಸಿರುವ ಎನ್.ಐ.ಎ ತಂಡ ಶೋಧ ಕಾರ್ಯ ನಡೆಸುತ್ತಿದೆ.




