March 22, 2026

ಮಂಗಳೂರು: ಪ್ರತಿಭಾ ಕುಳಾಯಿ ವಿರುದ್ಧ ಅಶ್ಲೀಲ ಪೋಸ್ಟ್ ಪ್ರಕರಣ: ಶ್ಯಾಮ ಸುದರ್ಶನ್ ಭಟ್‌ ಗೆ ನ.9ರವರೆಗೆ ನಿರೀಕ್ಷಣಾ ಜಾಮೀನು

0
IMG-20221022-WA0041.jpg

ಮಂಗಳೂರು: ಕೆಪಿಸಿಸಿ ಸಂಯೋಜಕಿ ಹಾಗೂ ಇತ್ತೀಚೆಗೆ ಟೋಲ್ ವಿರೋಧಿ ಹೋರಾಟ ಸಮಿತಿಯಲ್ಲಿ ಸಕ್ರಿಯವಾಗಿದ್ದ ಪ್ರತಿಭಾ ಕುಳಾಯಿ ಕುರಿತು ಅಶ್ಲೀಲವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ ಕಹಳೆ ನ್ಯೂಸ್ ಸಂಪಾದಕ ಶ್ಯಾಮ ಸುದರ್ಶನ್ ಭಟ್‌ ಎಂಬಾತನಿಗೆ ಕೋರ್ಟ್ ನ.9ರವರೆಗೆ ನಿರೀಕ್ಷಣಾ ಜಾಮೀನು ನೀಡಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿ ಕೀರ್ತನ್ ಶೆಟ್ಟಿ ಅಡ್ಯಾರ್ ಎಂಬಾತ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಟೋಲ್ ವಿರೋಧಿ ಹೋರಾಟ ಸಮಿತಿಯಲ್ಲಿ ಸಕ್ರಿಯವಾಗಿದ್ದ ಪ್ರತಿಭಾ ಕುಳಾಯಿ ಕುರಿತು ಕಹಳೆ ನ್ಯೂಸ್ ಸಂಪಾದಕ ಶ್ಯಾಮ ಸುದರ್ಶನ ಭಟ್ ಹೊಸಮೂಲೆ ಹಾಗೂ ಕೆ.ಆರ್.ಶೆಟ್ಟಿ ಎಂಬವರು ಅಶ್ಲೀಲವಾಗಿ ಪೋಸ್ಟ್ ಮಾಡಿದ್ದರು. ಇದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.

Leave a Reply

Your email address will not be published. Required fields are marked *

error: Content is protected !!