ಮೆಟಾ ಭಾರತದ ಮುಖ್ಯಸ್ಥ ಸ್ಥಾನಕ್ಕೆ ಅಜಿತ್ ಮೋಹನ್ ರಾಜೀನಾಮೆ
ನವದೆಹಲಿ: ಫೇಸ್ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಂನ ಮಾತೃ ಸಂಸ್ಥೆ ಮೆಟಾದ ಭಾರತದ ಮುಖ್ಯಸ್ಥ ಸ್ಥಾನಕ್ಕೆ ಅಜಿತ್ ಮೋಹನ್ ಅವರು ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ನಾಲ್ಕು ವರ್ಷಗಳ ಕಾಲ ಮೆಟಾದಲ್ಲಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಅವರು ತತ್‌ಕ್ಷಣಕ್ಕೆ ಜಾರಿಗೆ ಬರುವಂತೆ ರಾಜೀನಾಮೆ ನೀಡಿದ್ದಾರೆ.
ಇನ್ನು ಔದ್ಯೋಗಿಕ ಬದುಕಿನಲ್ಲಿ ಬೇರೆ ಅವಕಾಶ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ಅಜಿತ್ ಕೈಗೊಂಡಿದ್ದಾರೆ. ಕಂಪೆನಿಗೆ ಅವರ ಸೇವೆ ಅನನ್ಯವಾದುದು ಎಂದು ಮೆಟಾ ತಿಳಿಸಿರುವುದಾಗಿ ವರದಿಯಾಗಿದ್ದು, ಅಜಿತ್ ಮೋಹನ್ ಅವರು ಸ್ನ್ಯಾಪ್ ಕಂಪೆನಿಗೆ ನೇಮಕಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ





