February 4, 2026

ಡಿಪೋ ಬಳಿ ಬಸ್ ಹರಿದು ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

0
image_editor_output_image-283545485-1667458999140.jpg

ಬೆಂಗಳೂರು: ನಗರದ ಸುಮನಹಳ್ಳಿ ಡಿಪೋ ಬಳಿ ಬಿಎಂಟಿಸಿ ಬಸ್ ಹರಿದು ಬೈಕ್ ಸವಾರ ಯುವಕನೋರ್ವ ಬುಧವಾರ ರಾತ್ರಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಪ್ರಮೋದ್ (24) ಮೃತಪಟ್ಟಿರುವ ಯುವಕ ಎಂದು ತಿಳಿದು ಬಂದಿದೆ. ಸುಮನಹಳ್ಳಿ-ಲಗ್ಗೆರೆ ರಿಂಗ್ ರಸ್ತೆಯಲ್ಲಿ ಘಟನೆ ಸಂಭವಿಸಿದೆನ್ನಲಾಗಿದೆ.

ಬೈಕ್ ಸವಾರ ಪ್ರಮೋದ್, ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಸುಮನಹಳ್ಳಿಯಿಂದ ಲಗ್ಗೆರೆ ರಸ್ತೆ ಮಾರ್ಗವಾಗಿ ಆಗಮಿಸುತ್ತಿದ್ದಾಗ ರಸ್ತೆ ಉಬ್ಬು ಇದ್ದ ಕಾರಣ ನಿಧಾನವಾಗಿ ಸಾಗಿದ್ದಾರೆನ್ನಲಾಗಿದ್ದು, ಈ ವೇಳೆ ಹಿಂಬದಿಯಿಂದ ಬಂದ ಬಿಎಂಟಿಸಿ ಬಸ್, ಬೈಕ್ಗೆ ಢಿಕ್ಕಿ ಹೊಡೆದು ಸವಾರನ ಮೇಲೆ ಸಂಚರಿಸಿದೆ ಎಂದು ಹೇಳಲಾಗಿದೆ.

ತಲೆಗೆ ಬಲವಾದ ಪೆಟ್ಟು ಬಿದ್ದು ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!