ಹಿಂಗಾರು ಮಾರುತ: ಕರಾವಳಿ ಭಾಗದಲ್ಲಿ ಮಳೆ ಸುರಿಯುವ ಸಾಧ್ಯತೆ
ಮಂಗಳೂರು :ಬಂಗಾಲಕೊಲ್ಲಿಯಲ್ಲಿ ಮೇಲ್ಮೆ„ ಸುಳಿಗಾಳಿ ಉಂಟಾಗಿದ್ದು, ಹಿಂಗಾರು ಮಾರುತ ಚುರುಕುಗೊಳ್ಳುವ ನಿರೀಕ್ಷೆ ಇದೆ. ಪರಿಣಾಮ ದಕ್ಷಿಣ ಒಳನಾಡಿನಲ್ಲಿ ಉತ್ತಮ ಮಳೆಯಾಗಲಿದ್ದು, ಕರಾವಳಿ ಭಾಗದ ಅಲ್ಲಲ್ಲೂ ಸಾಧಾರಣ ಮಳೆ ಸುರಿಯುವ ನಿರೀಕ್ಷೆ ಇದೆ.
ಬುಧವಾರ ಸಾಯಂಕಾಲ ಸುಳ್ಯ ತಾಲೂಕಿನ ಹಲವೆಡೆ ಧಾರಾಕಾರವಾಗಿ ಮಳೆ ಸುರಿಯಿತು.
ಕೆಲವು ದಿನಗಳಿಂದ ಬಿಸಿಲು ವಾತವರಣ ಇದ್ದ ಸುಳ್ಯದಲ್ಲಿ ಬುಧ ವಾರ ಮಧ್ಯಾಹ್ನ ಬಳಿಕ ಮೋಡ ಕವಿದ ವಾತಾವರಣ ಕಾಣಿಸಿಕೊಂಡು ಒಂದು ಗಂಟೆ ಸಮಯ ಮಳೆಯಾಯಿತು.
ಸುಳ್ಯ ನಗರ, ಅರಂತೋಡು, ಬೆಳ್ಳಾರೆ, ಕಲ್ಮಡ್ಕ, ಜಾಲೂÕರು, ಸಂಪಾಜೆ, ಕಲ್ಲುಗುಂಡಿ, ಸುಬ್ರಹ್ಮಣ್ಯ, ಕೊಲ್ಲಮೊಗ್ರು ಕಡಬ, ಸೇರಿದಂತೆ ವಿವಿಧೆಡೆ ಮಳೆಯಾಯಿತು.




