September 20, 2024

ಮೂಡುಬಿದಿರೆ: ಶಾಲಾ ಬಸ್ – ಕಾರು ನಡುವೆ ಡಿಕ್ಕಿ: ಕಾರು ಚಾಲಕ ಗಂಭೀರ, ಆಸ್ಪತ್ರೆಗೆ ದಾಖಲು

0

ಮೂಡುಬಿದಿರೆ: ಶಾಲಾ ವಾಹನಕ್ಕೆ ಕಾರೊಂದು ಬುಧವಾರ ಸಾಯಂಕಾಲ ಅಲಂಗಾರು ಬಳಿ ಢಿಕ್ಕಿ ಹೊಡೆದ ಪರಿಣಾಮವಾಗಿ ಕಾರಿನ ಚಾಲಕ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.

ಮೂಡುಬಿದಿರೆ- ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ಆಲಂಗಾರಿನಲ್ಲಿ ಅಪಘಾತ ಸಂಭವಿಸಿದ್ದು, ಶಾಲಾ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

ಇನ್ನು ಮೂಡುಬಿದಿರೆ ಆಲಂಗಾರಿನ ಸೈಂಟ್ ಥೋಮಸ್ ಆಂಗ್ಲ ಮಾಧ್ಯಮ ಶಾಲೆಯ ಬಸ್ ಮಕ್ಕಳನ್ನು ಮನೆಗೆ ಬಿಡಲು ಬೆಳುವಾಯಿ ಕಡೆಗೆ ಹೋಗುತ್ತಿದ್ದಾಗ ಕಾರ್ಕಳದಿಂದ ಮೂಡುಬಿದಿರೆ ಕಡೆಗೆ ಅತೀ ವೇಗದಿಂದ ಬರುತ್ತಿದ್ದ ಕಾರು ಆಲಂಗಾರು ಬಳಿ ಬ್ರೇಕ್ ಹಾಕಿದ್ದು ಆಗ ತಕ್ಷಣ ಕಾರು ಬಲಕ್ಕೆ ತಿರುಗಿ ಶಾಲಾ ವಾಹನದ ಕಡೆಗೆ ಬಂದಿದೆ ಆಗ ಶಾಲಾ ವಾಹನದ ಚಾಲಕ ಎಡ ಕಡೆಗೆ ವಾಹನವನ್ನು ತಿರುಗಿಸಿದ್ದು,ಆಗ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಲ್ಲಿಯೇ ನಿಂತಾಗ ಕಾರು ಅಲ್ಲಿಗೆ ಬಂದು ಗುದ್ದಿದೆ. ಕಾರಿನ ಚಾಲಕನ ಮೂಗು ಮತ್ತು ಕಿವಿಯಿಂದ ರಕ್ತ ಹರಿಯುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಇನ್ನೋರ್ವ ವ್ಯಕ್ತಿಗೂ ಗಾಯಗಳಾಗಿದೆ. ಶಾಲಾ ವಾಹನದ ಮುಂಭಾಗವು ಸಂಪೂರ್ಣ ಜಖಂಗೊಂಡಿದೆ

Leave a Reply

Your email address will not be published. Required fields are marked *

error: Content is protected !!