March 20, 2026

ಕಾರ್ಕಳ: ಗುಜರಿ ಆಯುತ್ತಿದ್ದಾಗ ವಿದ್ಯುತ್ ಶಾಕ್, ವ್ಯಕ್ತಿ ಸಾವು

0
image_editor_output_image-1052078501-1667366531243.jpg

ಕಾರ್ಕಳ: ಗುಜರಿ ಆಯುತ್ತಿದ್ದ ವ್ಯಕ್ತಿಯೊಬ್ಬರಿಗೆ ವಿದ್ಯುತ್ ಶಾಕ್ ತಗುಲಿ ಮೃತಪಟ್ಟ ಘಟನೆ ನ. 1 ರಂದು ಬೆಳಿಗ್ಗೆ ನಡೆದಿದೆ.

ಮೃತರನ್ನು ರಾಮಕೃಷ್ಣ ನಾಯ್ಕ (54) ಎಂದು ಗುರುತಿಸಲಾಗಿದ್ದು, ನ. 1 ರಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ಎಂದಿನಂತೆ ರಸ್ತೆ ಬದಿಯ ಗುಜುರಿ ಹೆಕ್ಕಲು ಹೋಗಿದ್ದರು.

ಬಳಿಕ ಮಗ ದಿನೇಶ್ ನಾಯ್ಕ ಅವರಿಗೆ ಅವರ ಪರಿಚಯದ ವ್ಯಕ್ತಿಯೊಬ್ಬರು 7.15 ರ ಸುಮಾರಿಗೆ ದೂರವಾಣಿ ಕರೆ ಮಾಡಿ ತಮ್ಮ ಗುಜರಿ ಹೆಕ್ಕುತ್ತಿದ್ದ ಪ್ಲಾಸ್ಟಿಕ್ ಗೋಣಿ ಚೀಲದ ಮೇಲೆ ಬಿದ್ದಿದ್ದಾರೆ ಎಂದು ಹೇಳಿದ್ದಾರೆ.

ಕುಕ್ಕುಂದೂರು ಗ್ರಾಮದ ಜೋಡುರಸ್ತೆ ಎಂಬಲ್ಲಿ ಸುರೇಶ ಎಂಬವರ ಹೂವಿನ ಅಂಗಡಿಯ ಹತ್ತಿರ ರಸ್ತೆಯ ಬೀದಿಯಲ್ಲಿ ಗುಜರಿ ಹೆಕ್ಕುತ್ತಿದ್ದ

ಸ್ಥಳಕ್ಕೆ ಧಾವಿಸಿದ ದಿನೇಶ್ ನಾಯ್ಕ ಅವರಿಗೆ ವಿದ್ಯುತ್ ತಂತಿ ತುಂಡಾಗಿ ನೆಲಮಟ್ಟದವರೆಗೆ ನೇತಾಡುತ್ತಿರುವುದು ಕಂಡುಬಂದಿದೆ . ವಿದ್ಯುತ್ ವಯರನ್ನು ಆಕಸ್ಮಿಕವಾಗಿ ಮುಟ್ಟಿದ ಪರಿಣಾಮ ವಿದ್ಯುತ್ ಶಾಕ್‌ ತಗುಲಿದೆ. ತಕ್ಷಣ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ರಾಮಕೃಷ್ಣ ನಾಯ್ಕ್ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published. Required fields are marked *

error: Content is protected !!