ದಕ್ಷಿಣ ಕೊರಿಯಾದಲ್ಲಿ ಭೀಕರ ಕಾಲ್ತುಳಿತ: ನಟ, ಗಾಯಕ ಲೀ ಜಿಹಾನ್ ಸಾವು
ಸಿಯೋಲ್: ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿ ಶನಿವಾರ ನಡೆದ ಹ್ಯಾಲೋವೀನ್ ದುರಂತದ ಆಘಾತದಿಂದ ಅಲ್ಲಿನ ಜನತೆ ಇನ್ನೂ ಹೊರ ಬಂದಿಲ್ಲ. ಅಷ್ಟರಲ್ಲಾಗಲೇ ಘಟನೆಯಲ್ಲಿ ಮೃತಪಟ್ಟವರ ಗುಂಪಿನಲ್ಲಿ ಖ್ಯಾತ ಗಾಯಕ ಹಾಗೂ ನಟನೊಬ್ಬನೂ ಸೇರಿದ್ದ ಎಂಬ ಸುದ್ದಿ ತಿಳಿದು ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಿಯೋಲ್‌ನ ಇಟಾವಾನ್ ಜಿಲ್ಲೆಯಲ್ಲಿ ನಡೆದ ಭೀಕರ ಕಾಲ್ತುಳಿತದಲ್ಲಿ ನಟ, ಗಾಯಕ ಲೀ ಜಿಹಾನ್ ಮೃತಪಟ್ಟಿರುವುದಾಗಿ ದೃಢವಾಗಿದೆ. 24 ವರ್ಷದ ತಾರೆಯ ಹಠಾತ್ ನಿಧನಕ್ಕೆ ಅವರ ಕುಟುಂಬ, ಅಭಿಮಾನಿಗಳು ಸೇರಿದಂತೆ ಅಲ್ಲಿನ ಜನತೆ ಸಂತಾಪ ವ್ಯಕ್ತಪಡಿಸಿದ್ದಾರೆ.





